ಪುಟ್ಟ ಹಳ್ಳಿಯಿಂದ ಬಂದು ಶಿಖರದೆತ್ತರಕ್ಕೆ ಬೆಳೆದ ಪ್ರಣಬ್ ದಾ ಎಲ್ಲರಿಗೂ ಸ್ಫೂರ್ತಿ! - Former President Pranab Mukherjee Death
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನಕ್ಕೆ ನಟಿ, ರಾಜಕಾರಣಿ, ಬಿಜೆಪಿ ವಕ್ತಾರೆ ಭಾವನಾ ಸಂತಾಪ ಸೂಚಿಸಿದ್ದಾರೆ. ಹಲವು ಲೈವ್ ಸೆಮಿನಾರ್ಗಳಲ್ಲಿ ಅವರೊಂದಿಗೆ ನಾನು ಭಾಗಿಯಾಗಿದ್ದೇನೆ. ಅದು ನನ್ನ ಅದೃಷ್ಟ. ಕೈಗಾರಿಕೆ ಕ್ಷೇತ್ರಗಳ ಅರ್ಥಿಕ ವ್ಯವಸ್ಥೆ ಹೇಗಿರಬೇಕು ಎಂಬುದರ ಬಗ್ಗೆ ಅವರ ಮಾತುಗಳನ್ನು ಕೇಳಿದ್ದೇನೆ. ಒಂದು ಪುಟ್ಟ ಹಳ್ಳಿಯಿಂದ ಬಂದು ಸಾಧನಾ ಶಿಖರವೇರಿದ ಅವರು ಎಲ್ಲರಿಗೂ ಸ್ಫೂರ್ತಿ. ರಾಷ್ಟ್ರ ರಾಜಕಾರಣದ ಚಾಣಕ್ಯನನ್ನು ಕಳೆದುಕೊಂಡಿರುವುದು ಬಹಳ ನೋವಿನ ಸಂಗತಿ ಎಂದು ಭಾವನಾ ಸಂತಾಪ ಸೂಚಿಸಿದರು.