ಮಾಧ್ಯಮಗಳ ಮೇಲೆ ಶಿವಣ್ಣ ಮುನಿಸು... ಇದು ಕಾರಣ...! - undefined
ಪತ್ರಿಕಾ ಮಾಧ್ಯಮಗಳು ಮೊದಲು ಹೇಗಿದ್ದವೋ, ಈಗಲೂ ಹಾಗೇ ಇವೆ. ಆದರೆ, ಟಿವಿ ಮಾಧ್ಯಮಗಳು ಮಾತ್ರ ಬದಲಾಗಿವೆ. ಕನ್ನಡದ ಉತ್ತಮ ಚಿತ್ರಗಳ ಪ್ರಮೋಷನ್ ಕಾರ್ಯವನ್ನು ಮಾಧ್ಯಮಗಳು ಮರೆತಿವೆ. ಕೇವಲ ರಾಜಕೀಯ ಸುದ್ದಿಗಳನ್ನು ಪ್ರಸಾರ ಮಾಡುತ್ತವೆ. ಪತ್ರಿಕೆಗಳು ಹಾಗಿಲ್ಲ, ನಿತ್ಯ ಸಿನಿಮಾ ಸುದ್ದಿಗಳಿಗೆ ಒಂದು ಪುರವಣೆ ಮೀಸಲಿಡುತ್ತವೆ. ನಾವು ನಿಮಗೆ ಬೇಕಾದ ವೇಳೆಯಲ್ಲಿ ನಮ್ಮವರು ಅಂತಾ ಬೈಟ್ ಕೊಡ್ತೀವಿ. ಆದರೆ, ನೀವು ಮಾತ್ರ ಕನ್ನಡದ ಸಿನಿಮಾಗಳಿಗೆ ಕಡೆಗಣಿಸುತ್ತೀರಾ. ನಾನು ಹೇಳೋದರಲ್ಲಿ ತಪ್ಪಿದ್ದರೆ ದಯವಿಟ್ಟು ಕ್ಷಮಿಸಿ...ಹೀಗೆ ನಟ ಶಿವಣ್ಣ ವಿದ್ಯುನ್ಮಾನ ಮಾಧ್ಯಮಗಳ ಮೇಲೆ ಸ್ಪಲ್ಪ ಬೇಸರವಾಗಿಯೇ ಮಾತನಾಡಿದ್ದಾರೆ. ಕವಚ ಚಿತ್ರದ ಸಕ್ಸಸ್ ಮೀಟ್ನಲ್ಲಿ ಶಿವಣ್ಣ ಕೊಂಚ ಬೇಸರವಾಗಿಯೇ ಮಾತನಾಡಿದ್ರು...ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಏನೆಲ್ಲಾ ಮಾತನಾಡಿದ್ದಾರೆ ಎಂಬುದು ಇಲ್ಲಿದೆ ಈ ವಿಡಿಯೋದಲ್ಲಿದೆ ನೋಡಿ...