ಫೇಲಾಗಿದ್ದಕ್ಕೆ ಮಕ್ಕಳನ್ನು ಬೈಯಬೇಡಿ... ವಿದ್ಯಾರ್ಥಿಗಳ ಪೋಷಕರಿಗೆ ಪ್ರೇಮ್ ಮನವಿ - undefined
ಇಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು ನಟ ಪ್ರೇಮ್ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ. ಅದೇ ರೀತಿ ಫೇಲಾದ ವಿದ್ಯಾರ್ಥಿಗಳು ದಯವಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಕೈ ಮುಗಿದು ಮನವಿ ಮಾಡಿದ್ದಾರೆ. ನಿಮ್ಮ ತಂದೆ ತಾಯಿಗಳಿಗೆ ನೀವೇ ಪ್ರಪಂಚ. ಹಾಗಾಗಿ ನೀವು ಕೆಟ್ಟ ನಿರ್ಧಾರಕ್ಕೆ ಕೈಹಾಕಿ ಅವರಿಗೆ ಮೋಸ ಮಾಡಬೇಡಿ. ಚೆನ್ನಾಗಿ ಓದಿದವರಿಗಿಂತ ಫೇಲಾದ ಎಷ್ಟೋ ಮಂದಿ ದೊಡ್ಡ ವ್ಯಕ್ತಿಗಳಾಗಿದ್ದಾರೆ. ಹಾಗೇ ತಂದೆ-ತಾಯಿ ಕೂಡಾ ಮಕ್ಕಳಿಗೆ ಬೈಯಬೇಡಿ ಎಂದು ಪ್ರೇಮ್ ಮನವಿ ಮಾಡಿದ್ದಾರೆ.