ಮಾಸ್ಟರ್ ಹಿರಣ್ಣಯ್ಯ ನಿಧನಕ್ಕೆ ಸಂತಾಪ ಸೂಚಿಸಿದ ನಟ ಮಾಸ್ಟರ್ ಆನಂದ್ - undefined
ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಇಂದು ನಮ್ಮನ್ನು ಅಗಲಿದ್ದು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಪ್ರೇಮ್ ಅಭಿನಯದ 'ಪೂಜ್ಯಂ' ಚಿತ್ರದ ಮುಹೂರ್ತ ಸಮಾರಂಭಕ್ಕೆ ಬಂದಿದ್ದ ಮಾಸ್ಟರ್ ಆನಂದ್ ಸುದ್ದಿ ತಿಳಿದು ದುಃಖ ವ್ಯಕ್ತಪಡಿಸಿದರು. ಹಿರಣ್ಣಯ್ಯ ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರು ತೆಗೆದುಕೊಂಡ ದಿಟ್ಟ ನಿರ್ಧಾರಗಳು ಹಾಗೂ ಆದರ್ಶಗಳು ಎಂದಿಗೂ ನಮ್ಮೊಂದಿಗೆ ಇರುತ್ತವೆ ಎಂದು ಹಿರಣ್ಣಯ್ಯ ಅವರನ್ನು ನೆನಪಿಸಿಕೊಂಡರು.