ಪ್ರಜೆಯಾಗಿ ನನ್ನ ಕರ್ತವ್ಯ ಮಾಡಿದ್ದೇನೆ: ಮತದಾನ ಮಾಡಿದ ನಟ ಅಜಯ್ ರಾವ್ - ನಟ ಅಜಯ್ ರಾವ್ ಮತದಾನ
ಬೆಂಗಳೂರು: ಒಬ್ಬ ಪ್ರಜೆಯಾಗಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಎಲ್ಲರೂ ಬಂದು ಮತದಾನ ಮಾಡಿ ಅಂತ ನಟ ಅಜಯ್ ರಾವ್ ಮನವಿ ಮಾಡಿದರು. ತಮ್ಮ ತಾಯಿಯೊಂದಿಗೆ ಬಂದಿದ್ದ ಅಜಯ್ ರಾವ್, ಮತದಾನ ಮಾಡೋದು ಪ್ರತಿಯೊಬ್ಬರ ಕರ್ತವ್ಯ.. ಸ್ವಯಂ ಇಚ್ಚೆಯಿಂದ ಕರ್ತವ್ಯ ನಿಭಾಯಿಸಬೇಕು. ನಮ್ಮ ಮನೆ ಸ್ವಚ್ಛವಾಗಿರಬೇಕು, ಹಾಗೇ ದೇಶ ಕೂಡ ಸ್ವಚ್ಚವಾಗಿಡಬೇಕು. ಪ್ರತಿ ಬಾರಿ ಯೋಧ ಕೂಡ ಯುದ್ಧ ಮಾಡಬೇಕಾದ್ರೆ ಹಿಂದಿನ ಬಾರಿ ಯುದ್ಧ ಮಾಡಿದ್ದೇವೆ ಎಂದು ಸುಮ್ಮನಾಗಲ್ಲ. ಹಾಗೆಯೇ ಪ್ರಜೆ ಕೂಡ ಒಂದು ಬಾರಿ ಮತ ಹಾಕಿದ್ದೇವೆ ಎಂದು ಸುಮ್ಮನಿದ್ದರೆ ಸಾಲದು ಎಂದು ನಟ ಅಜಯ್ ರಾವ್ ಮತದಾರಿಗೆ ಮನವಿ ಮಾಡಿದ್ದಾರೆ.