ಮಂಡ್ಯದ ಮರಿ ಗಂಡು ಅಭಿ ಅಭಿನಯಕ್ಕೆ ಫ್ಯಾನ್ಸ್ ಫಿದಾ! ಚಿತ್ರದ ಬಗ್ಗೆ ಫ್ಯಾನ್ಸ್ ಹೇಳೋದೇನು? - undefined
ಇಂದು ತೆರೆಗೆ ಅಪ್ಪಳಿಸಿರುವ ಅಭಿಷೇಕ್ ಅಂಬರೀಶ್ರ ಚೊಚ್ಚಲ ಚಿತ್ರ 'ಅಮರ್'ಗೆ ಇಂದು ಭರ್ಜರಿ ಒಪನಿಂಗ್ ಸಿಕ್ಕಿದೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರದ ಎದುರು ಅಂಬಿ ಅಭಿಮಾನಿಗಳ ಸಾಗರವೇ ನೆರೆದಿತ್ತು. ಬ್ಯಾನರ್, ಕಟೌಟ್ಗಳು ರಾರಾಜಿಸುತ್ತಿದ್ದವು. ಮಾರ್ನಿಂಗ್ ಶೋಗೆ ಮೆರವಣಿಗೆ ಮೂಲಕ ಬಂದ ಅಭಿ, ಅಭಿಮಾನಿಗಳ ಜೊತೆ ಸಿನಿಮಾ ನೋಡಿದ್ರು. ಸಂಸದೆ ಸುಮಲತಾ ಅಂಬರೀಶ್ ಕೂಡ ಥಿಯೇಟರ್ಗೆ ಬಂದು ಮಗನಿಗೆ ವಿಶ್ ಮಾಡಿದ್ರು. ನಾಯಕಿ ತಾನ್ಯಾ ಹೋಪ್, ನಿರ್ದೇಶಕ ನಾಗಶೇಖರ್ ಅಭಿಗೆ ಸಾಥ್ ನೀಡಿದ್ರು. ಚಿತ್ರ ಕಣ್ತುಂಬಿಕೊಂಡ ಫ್ಯಾನ್ಸ್ ಫುಲ್ ಮಾರ್ಕ್ಸ್ ನೀಡಿದ್ರು.