ಮರೆಯಾದ ಬಾಲಿವುಡ್ ‘ಟ್ರಾಜಿಡಿ ಕಿಂಗ್'.. 6 ದಶಕಗಳ ಕಾಲ ಚಿತ್ರರಂಗ ಆಳಿದ ಕಲಾವಿದನ ಸಿನಿ ಜರ್ನಿ - ಹಿರಿಯ ನಟ ದಿಲೀಪ್ ಕುಮಾರ್
ಬಾಲಿವುಡ್‌ನ 'ಟ್ರಾಜಿಡಿ ಕಿಂಗ್'ಎಂದೇ ಖ್ಯಾತರಾಗಿದ್ದ ಹಿರಿಯ ನಟ ದಿಲೀಪ್ ಕುಮಾರ್ ಬರೋಬ್ಬರಿ ಆರು ದಶಕಗಳವರೆಗೆ ಸಿನಿರಂಗದಲ್ಲಿ ಮಿಂಚಿದವರು. ಅವರು ತಮ್ಮ ವೃತ್ತಿಜೀವನದಲ್ಲಿ 65ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ನಲ್ಲಿ ಸಾಲು ಸಾಲು ಹಿಟ್ ಸಿನಿಮಾ ನೀಡಿದ್ದ ಅವರು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮುಂಬೈನ ಹಿಂದೂಜಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.