ಉಳ್ಳಾಲ: ಬಾವಿಗೆ ಬಿದ್ದ ಭಾರಿ ಗಾತ್ರದ ಕಡವೆ ರಕ್ಷಣೆ - rescue of A large size Sambar deer inUllal
ಉಳ್ಳಾಲ: ಕಿನ್ಯ ಗ್ರಾಮದ ಉಕ್ಕುಡ ಮಸೀದಿಯ ಬಾವಿಗೆ ಶುಕ್ರವಾರ ಭಾರಿ ಗಾತ್ರದ ಕಡವೆಯೊಂದು ಬಿದ್ದು ಜೀವರಕ್ಷಣೆಗಾಗಿ ಚಡಪಡಿಸುತ್ತಿತ್ತು. ಮಸೀದಿಗೆ ಬಂದಿದ್ದ ಸ್ಥಳೀಯರು ಇದನ್ನ ಗಮನಿಸಿ ಅರಣ್ಯ ಇಲಾಖೆ, ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಕಡವೆ ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಕಡವೆಗೆ ಪ್ರಥಮ ಚಿಕಿತ್ಸೆ ನೀಡಿ ಕಾಡಿಗೆ ಬಿಟ್ಟು ಬಂದಿದ್ದಾರೆ. ವಲಯ ಅರಣ್ಯಾಧಿಕಾರಿ ಪ್ರಶಾಂತ್ ಕುಮಾರ್ ಪೈ ಮಾರ್ಗದರ್ಶನದಲ್ಲಿ ಕೋಟೆಕಾರು ಶಾಖೆ ಉಪವಲಯ ಅರಣ್ಯಾಧಿಕಾರಿ ಮಹಾಬಲ, ಅರಣ್ಯ ರಕ್ಷಕಿ ಸೌಮ್ಯ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Last Updated : Feb 3, 2023, 8:20 PM IST