ನೋಡಿ: ಪುತ್ತೂರು ಮಹಾಲಿಂಗೇಶ್ವರ ಜಾತ್ರೆಗೆ ಕೊಡಿಮರ ಏರಿಸುವ ಮೂಲಕ ಚಾಲನೆ - ಪುತ್ತೂರು ಮಹಾಲಿಂಗೇಶ್ವರ ಜಾತ್ರೆ ಧ್ವಜಾರೋಹಣ
ಇತಿಹಾಸಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆಗೆ ಇಂದು ಬೆಳಗ್ಗೆ ಕುಂಟಾರು ವೇ.ಮೂ.ರವೀಶ ತಂತ್ರಿಯವರ ನೇತೃತ್ವದಲ್ಲಿ ಕೊಡಿಮರ ಏರಿಸುವ (ಧ್ವಜಾರೋಹಣ) ಮೂಲಕ ಚಾಲನೆ ನೀಡಲಾಯಿತು. ಈ ವೇಳೆ ಪ್ರತಿವರ್ಷದಂತೆ ಗರುಡಗಳೆರಡು ಕೊಡಿಮರಕ್ಕೆ ದೂರದಿಂದಲೇ ಸುತ್ತು ಬಂದು ಹೋಗಿರುವುದು ವಿಶೇಷವಾಗಿತ್ತು. ಬಳಿಕ ರಥ ಬೀದಿಯ ಬಲಭಾಗದ ಕಟ್ಟೆಯಲ್ಲಿ ಹಿಂದೂ ಸಂಘಟನೆಯ ನೇತೃತ್ವದಲ್ಲಿ ಭಾಗವಧ್ವಜಾರೋಹಣ ನಡೆಯಿತು. ಶಾಸಕ ಸಂಜೀವ ಮಠಂದೂರು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ದೇವಳದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಪಿ.ಜಿ.ಚಂದ್ರಶೇಖರ್ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
Last Updated : Feb 3, 2023, 8:22 PM IST