ರಾಮನಗರ ಚಿತ್ರಮಂದಿರದಲ್ಲಿ 'ಜೇಮ್ಸ್' ಚಿತ್ರ ವೀಕ್ಷಿಸಿದ ಅಪ್ಪು ಅಭಿಮಾನಿಗಳು - James at ramanagra shyam film theater
ರಾಮನಗರ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಬಹು ನಿರೀಕ್ಷಿತ ಜೇಮ್ಸ್ ಚಿತ್ರ ಬಿಡುಗಡೆಯಾಗಿ ಸಖತ್ ಸದ್ದು ಮಾಡುತ್ತಿದೆ. ಇಂದು ಬೆಳಗ್ಗೆ 6.30ಕ್ಕೆ ಮೊದಲ ಶೋ ನೋಡಲೆಂದು ರಾಮನಗರದ ಶ್ಯಾಮ್ ಚಿತ್ರ ಮಂದಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಪ್ಪು ಅಭಿಮಾನಿಗಳು ಆಗಮಿಸಿದ್ದರು. ಚಿತ್ರಮಂದಿರ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು. ಇನ್ನೂ ಮೊನ್ನೆಯಿಂದಲೇ ಮೊದಲ ಶೋ ಟಿಕೆಟ್ ಪಡೆದ ಅಭಿಮಾನಿಗಳು ಇಂದು ಬಹಳ ಉತ್ಸುಕರಾಗಿ ಚಿತ್ರಮಂದಿರಕ್ಕೆ ಆಗಮಿಸಿ ಜೇಮ್ಸ್ ಚಿತ್ರ ವೀಕ್ಷಿಸಿದರು. ಚನ್ನಪಟ್ಟಣದ ಶಿವಾನಂದ ಚಿತ್ರಮಂದಿರ, ಶಾನ್ ಟಾಕೀಸ್ನ ಎಲ್ಲಾ ಶೋಗಳು ಹೌಸ್ಫುಲ್ ಆಗಿವೆ. ಅಭಿಮಾನಿಗಳು ಡೊಳ್ಳು ಕುಣಿತ, ಪೂಜಾ ಕುಣಿತ ನಡೆಸಿ ಸಂಭ್ರಮಾಚರಣೆ ನಡೆಸಿದರು.
Last Updated : Feb 3, 2023, 8:20 PM IST