Watch: ಭಜರಂಗದಳದ ಕಾರ್ಯಕರ್ತನ ಮೃತದೇಹ ಮೆರವಣಿಗೆ - ಬಿಗಿ ಪೊಲೀಸ್ ಬಂದೋಬಸ್ತ್ - Bajrang Dal activist murder in Shimoga
ಶಿವಮೊಗ್ಗ: ಭಜರಂಗದಳದ ಯುವ ಕಾರ್ಯಕರ್ತ ಹರ್ಷನ ಹತ್ಯೆಯಿಂದಾಗಿ ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ನಿನ್ನೆ ರಾತ್ರಿಯಿಂದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ, ಬೆಂಕಿ ಹಚ್ಚಲಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗದಂತೆ ಜಿಲ್ಲಾಡಳಿತ ಸೆಕ್ಷನ್ 144 ಜಾರಿಗೊಳಿಸಿ, ಶಾಲೆಗಳಿಗೆ ರಜೆ ನೀಡಿದೆ. ಹಿಂದೂ ಪರ ಸಂಘಟನೆಗಳು 'ಅಮರ್ ರಹೇ' ಎಂದು ಘೋಷಣೆ ಕೂಗುತ್ತಾ ಮೃತದೇಹದ ಮೆರೆವಣಿಗೆ ಮಾಡಿ, ಪ್ರತಿಭಟನೆ ನಡೆಸುತ್ತಿದ್ದಾರೆ.
Last Updated : Feb 3, 2023, 8:17 PM IST