ಉಡುಪಿ : ಸೈಕಲ್ ತುಳಿದು ಸೈಕ್ಲಿಸ್ಟ್ಗಳ ನಿಬ್ಬೆರಗಾಗಿಸಿದ ಪೇಜಾವರ ಸ್ವಾಮೀಜಿ - ಸೈಕಲ್ ತುಳಿದು ಸೈಕ್ಲಿಸ್ಟ್ಗಳ ನಿಬ್ಬೆರಗಾಗಿಸಿದ ಪೇಜಾವರ ಸ್ವಾಮೀಜಿ
ಉಡುಪಿ : ಉಡುಪಿಯ ಮಣಿಪಾಲದಲ್ಲಿ ನಡೆದ ಆರೋಗ್ಯಕ್ಕಾಗಿ ಸೈಕಲಿಂಗ್ ಜಾಥಾದಲ್ಲಿ ಪೇಜಾವರ ಸ್ವಾಮೀಜಿ ಸೈಕಲ್ ತುಳಿದು ಸೈಕ್ಲಿಸ್ಟ್‌ಗಳನ್ನು ನಿಬ್ಬೆರಗಾಗಿಸಿದ್ದಾರೆ. ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನತೀರ್ಥರು ಸೈಕಲ್ ಸವಾರಿ ಮಾಡಿ ಸೈಕ್ಲಿಂಗ್ ಜಾಥಾವನ್ನು ಉದ್ಘಾಟಿಸಿದರು. ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿ, ವೈದ್ಯಕೀಯ ಪ್ರಕೋಷ್ಟ ಮತ್ತು ವಸಂತಿ ಎ. ಪೈ ಪ್ರತಿಷ್ಠಾನದ ವತಿಯಿಂದ ಆಯೊಜಿಸಿದ್ದ ಆರೋಗ್ಯಕ್ಕಾಗಿ ಸೈಕ್ಲಿಂಗ್ ಜಾಥಾ ಕ್ರಾಯಕ್ರಮದಲ್ಲಿ ಪೇಜಾವರ ಶ್ರೀಗಳು ವೃತ್ತಿಪರ ಸೈಕ್ಲಿಸ್ಟ್‌ಗಳನ್ನೂ ನಾಚಿಸಿ ಸೈಕಲ್ ಸವಾರಿ ಮಾಡಿದ್ರು. ಸುಮಾರು 300 ಮೀಟರ್ ಲೀಲಾಜಾಲವಾಗಿ ಸೈಕಲ್ ಸವಾರಿ ಮಾಡಿದ್ದು ವಿಶೇಷವಾಗಿತ್ತು.
Last Updated : Feb 3, 2023, 8:18 PM IST