ಕರ್ನಾಟಕ

karnataka

ಕಾರು ಅಪಘಾತ

ETV Bharat / videos

ಕಾರು ಅಪಘಾತ: ವೈಎಸ್​ಆರ್​ಸಿಪಿ ಎಂಎಲ್​ಸಿ ಪರ್ವತ ರೆಡ್ಡಿಗೆ ಗಂಭೀರ ಗಾಯ, ಪಿಎ ಸಾವು - ಆಂಧ್ರಪ್ರದೇಶ

By ETV Bharat Karnataka Team

Published : Jan 5, 2024, 11:19 AM IST

Updated : Jan 5, 2024, 12:05 PM IST

ನೆಲ್ಲೂರು (ಆಂಧ್ರಪ್ರದೇಶ):ಕೊಡವಲೂರು ಮಂಡಲದ ರೇಗಡಿಚೇಲಕ ಎಂಬಲ್ಲಿ ಗುರುವಾರ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ವೈಎಸ್​ಆರ್​ಸಿಪಿ ಎಂಎಲ್​ಸಿ ಪರ್ವತ ರೆಡ್ಡಿ ಚಂದ್ರಶೇಖರ್ ರೆಡ್ಡಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಲ್ಲಿ ಎಂಎಲ್​ಸಿ ಅವರ ಪಿಎ ವೆಂಕಟೇಶ್​ವರಲು ಎಂಬುವರು ಮೃತರಾಗಿದ್ದಾರೆ.

ಘಟನೆ ವಿವರ: ಪರ್ವತ ರೆಡ್ಡಿ ತಮ್ಮ ಕಾರಿನಲ್ಲಿ ವಿಜಯವಾಡದಿಂದ ನೆಲ್ಲೂರಿಗೆ ಹೋಗುತ್ತಿದ್ದರು. ಇವರ ಕಾರಿನ ಮುಂದೆ ಲಾರಿಯೊಂದು ಸಂಚರಿಸುತ್ತಿತ್ತು. ಏಕಾಏಕಿ ಚಕ್ರ ಪಂಕ್ಚರ್​ ಆಗಿದ್ದರಿಂದ ಲಾರಿಯ ನಿಧಾನವಾಗಿ ಚಲಿಸಿದೆ. ಈ ವೇಳೆ ಪರ್ವತ ರೆಡ್ಡಿ ಅವರಿದ್ದ ಕಾರು ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದು, ಡಿವೈಡರ್​ ಮೇಲೆ ಪಲ್ಟಿಯಾಗಿ ಬಿದ್ದಿದೆ. ಪರಿಣಾಮ ಪರ್ವತ ರೆಡ್ಡಿ ಅವರ ಪಿಎ ಸ್ಥಳದಲ್ಲೇ ಸಾವನ್ನಪ್ಪಿದ್ದು, ಎಂಎಲ್​ಸಿ ತಲೆಗೆ ಗಂಭೀರ ಗಾಯಗಳಾಗಿದೆ. ಘಟನೆ ವೇಳೆ ಕಾರಿನಲ್ಲಿ ಒಟ್ಟೂ ಐವರು ಇದ್ದರು ಎಂದು ವರದಿಯಾಗಿದೆ. ಸದ್ಯ ಪರ್ವತ ರೆಡ್ಡಿ ಹಾಗೂ ಇತರ ಎಲ್ಲ ಗಾಯಾಳುಗಳನ್ನು ನೆಲ್ಲೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:ತಿರುವಿನಲ್ಲಿ ಕಾರಿನ ಮೇಲೆ ಲಾರಿ ಪಲ್ಟಿ: ಮಗು ಸೇರಿ ನಾಲ್ವರು ಸಾವು, ವೃದ್ಧೆ ಪಾರು

Last Updated : Jan 5, 2024, 12:05 PM IST

ABOUT THE AUTHOR

...view details