ಕೆಫೆ ಹೊರಗೆ ಯುವಕರಿಂದ ಹನುಮಾನ್ ಚಾಲೀಸಾ ಸ್ತುತಿ: ವಿಡಿಯೋ ನೋಡಿ - ಹರ್ಯಾಣದಲ್ಲಿ ಯುವಕರ ಭಜನಾ ಮಂಡಳಿ
ಹರ್ಯಾಣ:ಹಿರಿಯರು ಹಳ್ಳಿಗಳಲ್ಲಿ ಭಜನೆ ಹಾಡುವುದನ್ನು ನೋಡಿದ್ದೇವೆ. ತುಸು ಹೆಚ್ಚೆಂದರೆ ದೇವಸ್ಥಾನಗಳಲ್ಲಿ ಪೂಜಾ ವಿಶೇಷತೆಯಾಗಿ ಭಜಿಸುವುದು ಸಹಜ. ಆದರೆ, ಹರಿಯಾಣದಲ್ಲಿ ಯುವಕರ ತಂಡವೊಂದು ಹನುಮಾನ್ ಚಾಲೀಸಾವನ್ನು ಕೆಫೆಯ ಹೊರಗೆ ಪಠಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗುರುಗ್ರಾಮದ ಕೆಫೆಯ ಹೊರಗೆ ಕುಳಿತ ಯುವಕರ ತಂಡ ಸೊಗಸಾಗಿ ಚಾಲೀಸಾವನ್ನು ವಾದ್ಯಗಳ ಸಮೇತ ಹಾಡಿದ್ದಾರೆ. ಪ್ರತಿ ಮಂಗಳವಾರ ಈ ತಂಡ ಭಜಿಸುತ್ತಿರುವುದು ವಿಶೇಷ. ಗಿಟಾರ್, ಡೋಲಕ್ ವಾದ್ಯಗಳನ್ನು ಹಾಡಿಗೆ ಬಳಸಿಕೊಂಡಿದ್ದಾರೆ. ಯುವಕರ ತಂಡದಲ್ಲಿ ಯುವತಿಯರೂ ಕೂಡಿಕೊಂಡಿದ್ದರು. ಇವರ ಭಜನೆಯನ್ನು ಕೇಳಲು ಜನರು ಗುಂಪುಗೂಡುತ್ತಾರೆ. ಗುಂಪಿನಲ್ಲಿಯೇ ಕೆಲವರು ವಾದ್ಯವೃಂದದವಾದರೆ, ಉಳಿದವರು ಸುತ್ತುವರೆದು ಹಾಡು ಭಜಿಸುತ್ತಾರೆ. ಪ್ರತಿ ಮಂಗಳವಾರ ನಡೆಯುವ ಯುವ ಭಜನಾ ಮಂಡಳಿಗೆ ಮೆಚ್ಚುಗೆಯೂ ವ್ಯಕ್ತವಾಗಿದೆ.
ಹನುಮಾನ್ ಚಾಲೀಸಾ ಕುರಿತು..: ಹನುಮಾನ್ ಚಾಲೀಸಾವೆಂದರೆ ಭಗವಾನ್ ಹನುಮಂತನನ್ನು ಸ್ಮರಿಸುವ ಮತ್ತು ಸ್ತುತಿಸುವ 40 ಪದ್ಯಗಳ ಭಕ್ತಿಗೀತೆ. ಸಂತ ತುಳಸೀದಾಸರು ಇದನ್ನು ಮೊಘಲ್ ಚಕ್ರವರ್ತಿ ಔರಂಗಜೇಬನಿಂದ ಜೈಲಿನಲ್ಲಿ ಸೆರೆಯಾದಾಗ ರಚಿಸಿದ್ದರು. ಭಕ್ತಿಯಿಂದ ಸ್ಮರಿಸುವ ಹನುಮಾನ್ ಚಾಲೀಸಾ ಪಠಿಸುವುದರಿಂದ ಜೀವನದ ಎಲ್ಲಾ ಸಮಸ್ಯೆಗಳು ದೂರಾಗುತ್ತವೆ ಎಂಬುದು ಹಿಂದುಗಳ ನಂಬಿಕೆ.
ಇದನ್ನೂ ಓದಿ:ನೀರು ಉಳಿಸೋಣ..: ಕಡಲ ತೀರದಲ್ಲಿ ಸುದರ್ಶನ್ ಪಟ್ನಾಯಕ್ ಜನಜಾಗೃತಿ ಮರಳು ಕಲೆ