ದುರಂತಕ್ಕೂ ಮೊದಲು ಸೇತುವೆ ಮೇಲೆ ಯುವಕರ ಚೆಲ್ಲಾಟ: ವೈರಲ್ ವಿಡಿಯೋ - ಮೊರ್ಬಿ ಸೇತುವೆ ಮೇಲೆ ಯುವಕರ ಆಟದ ವಿಡಿಯೋ
ಗುಜರಾತ್ನ ಮೊರ್ಬಿ ತೂಗು ಸೇತುವೆ ದುರಂತಕ್ಕೂ ಮೊದಲಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಣ್ಣ ಪ್ರಮಾಣದ ಸೇತುವೆಯ ಮೇಲೆ ಹೆಚ್ಚಿನ ಸಂಖ್ಯೆಯ ಜನರು ಸೇರಿರುವುದಲ್ಲದೇ, ಕೆಲ ಯುವಕರು ಕುಚೇಷ್ಟೆ ಮಾಡುತ್ತಾ ಸಾಗುತ್ತಿರುವುದು ಕಾಣಬಹುದು. ಯುವಕರ ಆಟದಿಂದಾಗಿ ಇಡೀ ಸೇತುವೆ ಅಲ್ಲಾಡುತ್ತಿದೆ. ಇದರಿಂದ ಜನರು ಕಂಬಿಗಳನ್ನು ಹಿಡಿದುಕೊಂಡು ಭಯದಲ್ಲಿ ಸೇತುವೆ ದಾಟುತ್ತಿರುವುದು ವಿಡಿಯೋದಲ್ಲಿದೆ. ವಿಡಿಯೋದ ಅಸಲಿತನದ ಬಗ್ಗೆ "ಈಟಿವಿ ಭಾರತ" ಯಾವುದೇ ದೃಢೀಕರಣ ನೀಡುವುದಿಲ್ಲ. ಇದು ವೈರಲ್ ವಿಡಿಯೋ ಆಗಿದೆ.
Last Updated : Feb 3, 2023, 8:30 PM IST