ಕರ್ನಾಟಕ

karnataka

ಯುವಕ ಉರುಳು ಸೇವೆ

ETV Bharat / videos

ಕಳಪೆ ಕಾಮಗಾರಿ ವಿರೋಧ: ರಸ್ತೆಯ ಕೆಸರು ನೀರಲ್ಲಿ ಯುವಕರಿಂದ ಉರುಳು ಸೇವೆ ಮಾಡಿ ಆಕ್ರೋಶ - ಕಳಪೆ ಕಾಮಗಾರಿ

By

Published : May 10, 2023, 12:13 AM IST

ವಿಜಯನಗರ:ರಸ್ತೆಯಲ್ಲಿ ನಿಂತ ಮಳೆ ನೀರಲ್ಲಿ ಯುವಕನೊಬ್ಬ ಉರುಳು ಸೇವೆ ಮಾಡಿ ಕಳಪೆ ಕಾಮಗಾರಿ ವಿರೋಧಿಸಿ ಪ್ರತಿಭಟಿಸಿದ ಘಟನೆ ಹೊಸಪೇಟೆ ನಗರದಲ್ಲಿ ಮಂಗಳವಾರ ನಡೆದಿದೆ.

ವಿಜಯನಗರ ಅಭಿವೃದ್ಧಿ ನೋಡ್ರಪ್ಪೋ ವಿಜಯನಗರ ಅಭಿವೃದ್ಧಿ ಎನ್ನುತ್ತ ವ್ಯಂಗ್ಯವಾಗಿ  ಯುವಕನು ನೀರಲ್ಲಿ ಉರುಳು ಸೇವೆ ಮಾಡಿ ಎಲ್ಲರ ಮನ ಸೆಳೆದಿದ್ದಾನೆ.  ಉರುಳು ಸೇವೆಯನ್ನು ಮತ್ತೊಬ್ಬ ಯುವಕ  ವಿಡಿಯೋ ಮಾಡಿದ್ದು,ಜನರ ಎದುರು ವಿಜಯನಗರದ ಅಭಿವೃದ್ಧಿಯನ್ನು ಟೀಕಿಸಿದ್ದಾನೆ.

ಹೊಸಪೇಟೆ ನಗರದಲ್ಲಿ ಕಳಪೆ , ಅವೈಜ್ಞಾನಿಕ ಕಾಮಗಾರಿಯಿಂದ ಸರಾಗವಾಗಿ ನೀರು ಹರಿಯುತ್ತಿಲ್ಲ.  ವಿವಿಧ ವಾರ್ಡ್‌ಗಳಲ್ಲಿ ರಸ್ತೆ ತುಂಬೆಲ್ಲ ನೀರು ನಿಂತಿದೆ. ಕಳಪೆ ರಸ್ತೆ ನಿರ್ಮಾಣ ಮತ್ತು ಚರಂಡಿ ಕಾಮಗಾರಿ ಸಮರ್ಪಕ ಕೈಗೊಳ್ಳದ ಕಾರಣ ಈ ಸಮಸ್ಯೆ ತಲೆದೋರಿದೆ ಎಂದು ಸ್ಥಳೀಯ ನಿವಾಸಿಗಳು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹೊಸಪೇಟೆ ನಗರ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರ ಸಂಜೆ ಆಕಸ್ಮಿಕ ಮಳೆ ಸುರಿದಿದ್ದು, ಹಲವು ಕಡೆ ರಸ್ತೆಗಳಲ್ಲಿ ನೀರು ನಿಂತು ಜನಜೀವನ   ಅಸ್ತವ್ಯಸ್ತವಾಗಿದೆ. 

ಇದನ್ನು ಓದಿ:2018ರ ಚುನಾವಣೆಗೆ ಹೋಲಿಸಿದರೆ ಕರ್ನಾಟಕದಲ್ಲಿ ವಶಪಡಿಸಿಕೊಳ್ಳುವಿಕೆ ನಾಲ್ಕು ಪಟ್ಟು ಹೆಚ್ಚಾಗಿದೆ: ಚುನಾವಣಾ ಆಯೋಗ

ABOUT THE AUTHOR

...view details