ಹೈವೋಲ್ಟೇಜ್ ಪವರ್ ತುಂಬಾ ಡೇಂಜರ್.. ವಿದ್ಯುತ್ ತಂತಿ ಹಿಡಿದ ಯುವಕ ಸುಟ್ಟು ಕರಕಲು - ಹೈವೋಲ್ಟೇಜ್ ಪವರ್ ತುಂಬಾ ಡೇಂಜರ್
ದುರ್ಗ(ಛತ್ತೀಸ್ಗಡ): ಛತ್ತೀಸ್‌ಗಢ ಎಕ್ಸ್‌ಪ್ರೆಸ್ ರೈಲಿನ ಬೋಗಿಯ ಮೇಲೆ ಹತ್ತಿದ ಯುವಕ ರೈಲ್ವೆ ವಿದ್ಯುತ್ ತಂತಿ ಸ್ಪರ್ಶಿಸಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಯುವಕನು ರೈಲಿನ ಹೈವೋಲ್ಟೇಜ್ OHE ತಂತಿಯನ್ನು ಮುಟ್ಟಿದ್ದು, ತಕ್ಷಣ ಸ್ಫೋಟ ಸಂಭವಿಸಿ ಯುವಕ ಬೋಗಿಯ ಮೇಲೆಯೇ ಸುಟ್ಟು ಕರಕಲಾಗಿ ಬಿದ್ದಿದ್ದಾನೆ. ತಕ್ಷಣ ಜಿಆರ್‌ಪಿ ಪೊಲೀಸರು ಯುವಕನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ರಾಯ್‌ಪುರಕ್ಕೆ ರವಾನಿಸಲಾಗಿದೆ. ರಾಯಪುರದ ಮೆಕಹರಾದಲ್ಲಿ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Last Updated : Feb 3, 2023, 8:30 PM IST