ಕರ್ನಾಟಕ

karnataka

ನಾಗಾರ್ಜುನ ಕಾಲೇಜಿನಲ್ಲಿ ಸಡಗರ ಸಂಭ್ರಮದಿಂದ ಯುವೋತ್ಸವ ಆಚರಣೆ..

ETV Bharat / videos

ನಾಗಾರ್ಜುನ ಕಾಲೇಜಿನಲ್ಲಿ ಸಂಭ್ರಮದ ಯುವೋತ್ಸವ ಆಚರಣೆ.. 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ - Youth Festival in Nagarjuna College

By

Published : Mar 29, 2023, 6:11 PM IST

ದೇವನಹಳ್ಳಿ:ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದ ವತಿಯಿಂದ ಆಯೋಜನೆ ಮಾಡಲಾಗುವ ಯುವೋತ್ಸವ ಕಾರ್ಯಕ್ರಮವನ್ನು ಈ ಬಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ನಾಗಾರ್ಜುನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ. 22ನೇ ಯುವೋತ್ಸವ ಕಾರ್ಯಕ್ರಮ ‌ಇದಾಗಿದ್ದು, ನಿರಂತರ ಮೂರು ದಿನಗಳ ಕಾಲ ನಾಗಾರ್ಜುನ ಕಾಲೇಜು ಕ್ಯಾಂಪಸ್​ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. 

ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದಡಿ ಬರುವ 75ಕ್ಕೂ ಹೆಚ್ಚು ಕಾಲೇಜುಗಳ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಯುವೋತ್ಸವದಲ್ಲಿ ಭಾಗಿಯಾಗಿದ್ದಾರೆ. ಯುವೋತ್ಸವ ಕಾರ್ಯಕ್ರಮಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಉಪಕುಲಪತಿಗಳಾದ ಡಾ ಎಸ್ ವಿದ್ಯಾಶಂಕರ್, ದೀಪ ಬೆಳಗುವುದರ ಮೂಲಕ ಇಂದು ಚಾಲನೆ ನೀಡಿದರು. ನಂತರ ‌ಮಾತನಾಡಿದ ಅವರು, ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿ‌ ಬಹುಮಾನ ಗೆಲ್ಲಬೇಕು ಎಂದರು. 

ನಾಗಾರ್ಜುನ ಎಜುಕೇಷನ್ ಸೊಸೈಟಿ ಸಿಇಒ ಭಾನು ಚೈತನ್ಯ ಮಾತನಾಡಿ, ಯುವೋತ್ಸವ ಕಾರ್ಯಕ್ರಮ ಆಯೋಜನೆ ಮಾಡುವ ಸುವರ್ಣವಾಕಾಶ ಈ ಬಾರಿ ನಮ್ಮ ಕಾಲೇಜಿಗೆ ಸಿಕ್ಕಿದ್ದು ಸಂತಸ ತಂದಿದೆ. ರಾಜ್ಯದ ಬೇರೆ ಬೇರೆ ಕಾಲೇಜಿಗಳಿಂದ ನಮ್ಮ ಕಾಲೇಜಿಗೆ ಆಗಮಿಸಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಕಾಲ ವಸತಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. 

ಇನ್ನೂ ಮೂರು ದಿನಗಳ ಕಾಲ ನಡೆಯಲಿರುವ ಯುವೋತ್ಸವದಲ್ಲಿ ಮೊದಲ ದಿನ‌ ಕ್ರೀಡೋತ್ಸವ ಹಾಗೂ ಎರಡನೇ ದಿನ ಸಾಂಸ್ಕೃತಿಕ ಚಟುವಟಿಕೆಗಳು, ಕಲೆ ಹಾಗೂ ಸಂಸ್ಕೃತಿ‌ ಬಿಂಬಿಸುವ ಕಲಾ‌ಪ್ರದರ್ಶನಗಳು ಜರುಗಲಿವೆ. ಯುವೋತ್ಸವದಲ್ಲಿ ಭಾಗಿಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಸಿಇಒ ಭಾನು ಚೈತನ್ಯ ಶುಭ ಕೋರಿದರು.

ಇದನ್ನೂ ಓದಿ:'ವೀಕೆಂಡ್​ ವಿತ್​ ರಮೇಶ್'​ನಲ್ಲಿ ಭಾರತದ ಮೈಕೆಲ್ ಜಾಕ್ಸನ್ ಭಾಗಿ!

ABOUT THE AUTHOR

...view details