ಕರ್ನಾಟಕ

karnataka

ಬಾಲಸೋರ್ ಜಿಲ್ಲೆಯ ಸೊರೊ ಪೊಲೀಸ್ ಠಾಣೆ

ETV Bharat / videos

ಆನ್‌ಲೈನ್ ಗೇಮ್‌: ಒಂದು ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡ ಯುವಕ ಆತ್ಮಹತ್ಯೆ - hospital start investigation

By

Published : Jul 27, 2023, 4:05 PM IST

ಒಡಿಶಾ:ಬಾಲಸೋರ್ ಜಿಲ್ಲೆಯ ಸೊರೊ ಪೊಲೀಸ್ ಠಾಣಾ ವ್ಯಾಪ್ತಿಯ ಗುಡಾ ಗ್ರಾಮದಲ್ಲಿ ಆನ್‌ಲೈನ್ ಗೇಮ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ಹಣ  ಕಳೆದುಕೊಂಡ ನಂತರ 19 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಉದಯ ಕುಮಾರ್ ಬೆಹೆರಾ ಎಂದು ಗುರುತಿಸಲಾಗಿದೆ. ಅವರು ಬಾಲಸೋರ್‌ನ ಎಬಿ ಕಾಲೇಜಿನಲ್ಲಿ ಎರಡನೇ ವರ್ಷದ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದರು. ಉದಯ್ ಕಾಲೇಜು ಹಾಸ್ಟೆಲ್​ನಲ್ಲಿ ವ್ಯಾಸಂಗಕ್ಕಾಗಿ ಸೇರಿಕೊಂಡಿದ್ದ. ಎರಡು ದಿನಗಳ ಹಿಂದೆ ತನ್ನ ಗ್ರಾಮಕ್ಕೆ ಬಂದಿದ್ದ ಎಂಬುದಾಗಿ ತಿಳಿದು ಬಂದಿದೆ.

ಉದಯ್ ಹೆಚ್ಚಾಗಿ ಮನೆಯಲ್ಲಿ ಆನ್‌ಲೈನ್ ಆಟಗಳನ್ನು ಆಡುತ್ತಿದ್ದ. ಇದನ್ನು ಕಂಡು ತಾಯಿ ಕೂಡ ಹಲವಾರು ಬಾರಿ ವಿರೋಧಿಸಿದ್ದರು. ಆದರೆ ಉದಯ್ ಆಟವನ್ನು ನಿಲ್ಲಿಸಿರಲಿಲ್ಲ. ಆನ್​ಲೈನ್ ಗೇಮ್ ಆಡುತ್ತಾ ಅದ್ಯಾವಾಗ ಲಕ್ಷಗಟ್ಟಲೇ ಹಣ ಕಳೆದುಕೊಂಡಿದ್ದಾನೆ ಎಂಬುದು ನಮ್ಮ ಗಮನಕ್ಕೆ ಬಂದಿಲ್ಲ. ಆನ್‌ಲೈನ್ ಆಟಗಳಲ್ಲಿ ಲಕ್ಷಗಟ್ಟಲೆ ರೂಪಾಯಿಗಳನ್ನು ಕಳೆದುಕೊಂಡಿದ್ದರಿಂದ, ಉದಯ್ ಹೆಚ್ಚಿನ ಸಮಯ ಅಸಮಾಧಾನಗೊಂಡಿದ್ದ ಎಂದು ಪೋಷಕರು ತಿಳಿಸಿದ್ದಾರೆ.

ಆಸ್ಪತ್ರೆಗೆ ಆಗಮಿಸಿ ತನಿಖೆ ಆರಂಭಿಸಿದ ಪೊಲೀಸರು: ಉದಯ್ ಮಂಗಳವಾರ ರಾತ್ರಿ 10.30ಕ್ಕೆ ನಿದ್ರೆಗೆ ಜಾರಿದ್ದಾನೆ. ಬುಧವಾರ ಬೆಳಗ್ಗೆ ಮಗ ಫ್ಯಾನ್​ಗೆ ನೇಣು ಬಿಗಿದುಕೊಂಡಿರುವುದನ್ನು ತಾಯಿ ಗಮನಿಸಿದ್ದಾರೆ. ನಂತರ ವಿಷಯ ತಿಳಿದು ಗ್ರಾಮಸ್ಥರು ಮತ್ತು ಸಂಬಂಧಿಕರು ಮಗನನ್ನು ರಕ್ಷಿಸಲು ಸೊರೊ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಆಸ್ಪತ್ರೆಗೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:ಇದು ಅಪಾಯಕಾರಿ - ಎಚ್ಚರ...  ಆನ್‌ಲೈನ್ ಗೇಮಿಂಗ್‌ ಗೀಳಿನಿಂದ ತೀವ್ರ ನಡುಕದ ಸಮಸ್ಯೆಯಿಂದ ಬಳಲುತ್ತಿರುವ ಬಾಲಕ..!

ABOUT THE AUTHOR

...view details