ಕರ್ನಾಟಕ

karnataka

ಪ್ರೇಯಿಸಿಯಿಂದ ವಂಚನೆಗೊಳಗಾಗಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ETV Bharat / videos

ವಿದೇಶಕ್ಕೆ ತೆರಳಿ ಮದುವೆಗೆ ನಿರಾಕರಿಸಿದ ಪ್ರೇಯಸಿ.. ನೀರಿನ ಟ್ಯಾಂಕ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ! - ಪಂಜಾಬ್​ನ ಲೂಧಿಯಾನ

By

Published : Mar 2, 2023, 8:06 PM IST

Updated : Mar 2, 2023, 9:53 PM IST

ಲೂಧಿಯಾನ (ಪಂಜಾಬ್​): ಯುವಕನೊಬ್ಬ ಹುಡುಗಿಯನ್ನು ಪ್ರೀತಿಸಿ ನಂತರ ವಂಚನೆಗೆ ಒಳಗಾಗಿದ್ದರಿಂದ ಮನನೊಂದು ಜಲಮಂಡಳಿ ನಿರ್ಮಿಸಿರುವ ಟ್ಯಾಂಕರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪಂಜಾಬ್​ನ ಲೂಧಿಯಾನದಲ್ಲಿ ನಡೆದಿದೆ. 

ಹುಡುಗಿಯೊಬ್ಬಳನ್ನು ಹರ್​ಪ್ರೀತ್​ಸಿಂಗ್ ಎಂಬ ಯುವಕ​ ಹುಚ್ಚನಂತೆ ಪ್ರೀತಿಸಿದ್ದನಂತೆ. ನಂತರ ಅವಳಿಗೆ 10 ಲಕ್ಷ ರೂ ಖರ್ಚು ಮಾಡಿ ಕೆನಾಡಕ್ಕೆ ಕಳುಹಿಸಿದ್ದಾನೆ. ಆದರೆ ಅಲ್ಲಿ ಶಾಶ್ವತವಾಗಿ ನೆಲೆಸಿದ ಹುಡುಗಿ ಇವನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಅಷ್ಟೇ ಅಲ್ಲದೇ ಇವನ ನಂಬರ್​ ಅನ್ನು ಕೂಡಾ ಬ್ಲಾಕ್ ಮಾಡಿದ್ದಾಳೆ. ಇದರಿಂದ ಶಾಕ್​​ಗೆ ಒಳಗಾದ ಯುವಕ ಪೊಲೀಸ್​ ಠಾಣೆಯಲ್ಲೂ ದೂರು ದಾಖಲಿಸಿದ್ದ. ಆದರೆ, ಸಿಬ್ಬಂದಿಯಿಂದ ನ್ಯಾಯಸಿಗದ ಕಾರಣ ನಂತರ ನೀರಿನ ಟ್ಯಾಂಕರ್ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಂತರ ಸ್ಥಳಕ್ಕೆ ಪಂಜಾಬ್ ಪೊಲೀಸ್​​​ ಇಲಾಖೆ ಹಿರಿಯ ಅಧಿಕಾರಿಗಳು ಬಂದು ಮನವೊಲಿಸಿ ಆತನನ್ನು ಕೆಳಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.   

'ಯುವಕ ಹರ್‌ಪ್ರೀತ್ ಸಿಂಗ್ ಟ್ಯಾಂಕ್ ಮೇಲೆ ಏರಿ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದ. ನಂತರ ನಾವು ಸ್ಥಳಕ್ಕೆ ತೆರಳಿ ಮನವೊಲಿಸಿ ಆತನನ್ನು ಕೆಳಗೆ ಇಳಿಸಿದ್ದೇವೆ. ಇದೀಗ ಯುವಕನನ್ನು ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ' ಎಂದು ಹಿರಿಯ ಪೊಲೀಸ್ ಅಧಿಕಾರಿ ಸುಭಮ್ ಅಗರ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ :ಕಾಲೇಜಿನಿಂದ ಒತ್ತಡ ಆರೋಪ: ತರಗತಿಯಲ್ಲೇ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

Last Updated : Mar 2, 2023, 9:53 PM IST

ABOUT THE AUTHOR

...view details