Independence Day: ಹಾಸನ ಎಸ್ಪಿ ಕಚೇರಿಯಲ್ಲಿ ಬುಡಕಟ್ಟು ಯುವತಿಯಿಂದ ಧ್ವಜಾರೋಹಣ - ಪ್ರಥಮ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿ
ಹಾಸನ:ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು 77ನೇ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಬುಡಕಟ್ಟು ಸಮುದಾಯದ ಯುವತಿ, ಪ್ರಥಮ ಪಿಯುಸಿ ಓದುತ್ತಿರುವ ಬೇಲೂರು ತಾಲೂಕಿನ ಅಂಗಡಿಹಳ್ಳಿ ಗ್ರಾಮದ ಸಂಗೀತ ಧ್ವಜಾರೋಹಣ ಮಾಡಿದರು. ಸಂಗೀತ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿದ್ದಾರೆ. ಎಸ್ಪಿ ಹರಿರಾಂ ಶಂಕರ್ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ರೈತರ ಜೊತೆಗೆ ಭತ್ತದ ಸಸಿ ನಾಟಿ ಮಾಡಿದ ಐಎಎಸ್ ಅಧಿಕಾರಿ:'ರೈತರೊಂದಿಗೆ ಒಂದು ದಿನ' ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿರುವ ಕೊಪ್ಪಳ ಜಿ.ಪಂ ಸಿಇಒ ರಾಹುಲ್ ರತ್ನಂ ಪಾಂಡೆ ಅವರು ಇಂದು ಸ್ವಾತಂತ್ರ್ಯೋತ್ಸವದ ನಿಮಿತ್ತ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿ ಹೋಬಳಿಯ ಕೋಟಯ್ಯ ಕ್ಯಾಂಪಿನಲ್ಲಿ ರೈತರ ಜೊತೆಗೆ ಭತ್ತದ ಗದ್ದೆಯಲ್ಲಿ ಸಸಿಗಳನ್ನು ನಾಟಿ ಮಾಡಿದರು. ಸಿಇಒ ಬಿಳಿ ಪಂಚೆ ಹಾಗೂ ಟಿ ಶರ್ಟ್ ಧರಿಸಿದ್ದರು. ನಂತರ ಹೊಲದಲ್ಲೇ ಕುಳಿತು ಮಧ್ಯಾಹ್ನದ ಊಟ ಮಾಡಿದರು.
ಇದನ್ನೂ ಓದಿ:8.88 ಕೋಟಿಗೂ ಹೆಚ್ಚು ಹರ್ಘರ್ ತಿರಂಗಾ ಸೆಲ್ಫಿ.. ಪ್ರಧಾನಿ ಮೋದಿ ಕರೆಗೆ ಜನರ ಅದ್ಭುತ ಸ್ಪಂದನೆ