ಅಪಘಾತದಿಂದ ಪಾರಾದ ಯುವಕ; ಮೈ ಜುಂ ಎನಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ.. - ನಿಂತಿರುವ ಬೈಕ್ಗೆ ಕ್ಯಾಂಟರ್ ಡಿಕ್ಕಿ
ತುಮಕೂರು :ಭೀಕರ ಅಪಘಾತವೊಂದರಲ್ಲಿ ಯುವಕನೊರ್ವ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಮನು ಎಂಬ ಯುವಕ ಕೆಲಸದ ನಿಮತ್ತ ಬೈಕ್‌ನಲ್ಲಿ ಕುಣಿಗಲ್ ತಾಲೂಕಿನ ಅಂಚೇಪಾಳ್ಯಕ್ಕೆ ಬಂದು ಹೋಟೆಲ್ ಮುಂಭಾದದ ರಸ್ತೆ ಬದಿಯಲ್ಲಿ ಬೈಕ್ ಮೇಲೆ ಕುಳಿತುಕೊಂಡಿದ್ದರು. ಈ ವೇಳೆ ಹಾಸನ ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆಯ ಎಡ ಬದಿಗೆ ಅತಿ ವೇಗವಾಗಿ ನುಗ್ಗಿತು. ಇದನ್ನು ಗಮನಿಸಿದ ಮನು ಕ್ಷರ್ಣಾದದಲ್ಲಿ ಬೈಕ್ ಬಿಟ್ಟು ಓಡಿ ಹೋಗಿದ್ದಾರೆ.
ಇತ್ತ ವೇಗವಾಗಿ ಬಂದ ಕ್ಯಾಂಟರ್ ಬೈಕ್ ಮೇಲೆ ಹರಿದ ಪರಿಣಾಮ ಬೈಕ್ ಸಂಪೂರ್ಣ ಜಖಂಗೊಂಡಿದೆ. ಯುವಕ ತಕ್ಷಣದ ಎಚ್ಚೆತ್ತುಕೊಂದು ಬೈಕ್ ಬಿಟ್ಟು ಓಡಿದ್ದಕ್ಕೆ ಕೂದಲೆಳೆ ಅಂತರದಲ್ಲಿ ಪ್ರಾಣ ಉಳಿದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಯಾನಕವಾಗಿದೆ.
ಇದನ್ನೂ ಓದಿ :ಬೆಂಗಳೂರಿನಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಕೇಸ್: ತಂದೆಯನ್ನು ಭೇಟಿಯಾಗಲು ಹೊರಟಿದ್ದವ ಅಪಘಾತಕ್ಕೆ ಬಲಿ