ಕರ್ನಾಟಕ

karnataka

ರೈಲ್ವೆ ಟ್ರ್ಯಾಕ್​ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕ

ETV Bharat / videos

ರೈಲ್ವೆ ಟ್ರ್ಯಾಕ್​ನಲ್ಲಿ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ಯುವಕ: ಸಿನಿಮೀಯ ರೀತಿಯಲ್ಲಿ ರಕ್ಷಣೆ! - ETV Bharath Kannada news

By

Published : Feb 8, 2023, 9:50 PM IST

Updated : Feb 14, 2023, 11:34 AM IST

ದಾವಣಗೆರೆ:ರೈಲು ಬರುವುದನ್ನು ಗಮನಿಸಿದ ಯುವಕನೋರ್ವ ರೈಲಿಗೆ ತಲೆ ಕೊಡಲು ಹಳಿ ಮೇಲೆ ಮಲಗಿದ್ದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಿಸಿರುವ ಘಟನೆ ದಾವಣಗೆರೆ ನಗರದ ಅಶೋಕ ಚಿತ್ರ ಮಂದಿರ ಬಳಿಯ ರೈಲ್ವೇ ಗೇಟ್​ನಲ್ಲಿಂದು ನಡೆಯಿತು. ಆತ್ಮಹತ್ಯೆಗೆ ಯತ್ನಿಸಿದ ಯುವಕ ಯಾರೆಂಬುದರ ಮಾಹಿತಿ ಲಭ್ಯವಾಗಿಲ್ಲ. ರೈಲ್ವೇ ನಿಲ್ದಾಣದಲ್ಲಿ ತಂಗಿದ್ದ ಎಕ್ಸ್​ಪ್ರೆಸ್ ರೈಲು ಹೊರಡುವುದನ್ನು ಗಮನಿಸಿ, ರೈಲು ನೂರು ಮೀಟರ್​ ದೂರವಿರುವಾಗ ಯುವಕ ಹಳಿ ಮೇಲೆ ಮಲಗಿದ್ದಾನೆ. ಸ್ಥಳೀಯರು ಕೂಗಿಕೊಂಡರೂ ಕ್ಯಾರೆನ್ನದೆ ಆತ ಮಲಗಿದ್ದು ಅಲ್ಲೇ ಇದ್ದ ಮೂವರು ಓಡಿ ಹೋಗಿ ಬಚಾವ್ ಮಾಡಿದ್ದಾರೆ. ಯುವಕನನ್ನು ರಕ್ಷಿಸಿರುವ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದ್ದಾರೆ.  

ಇದನ್ನೂ ಓದಿ:Watch: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರು

Last Updated : Feb 14, 2023, 11:34 AM IST

ABOUT THE AUTHOR

...view details