ಹುಬ್ಬಳ್ಳಿಯಲ್ಲಿ 14,250 ರೂಪಾಯಿ ಸಂಚಾರ ದಂಡ ಪಾವತಿಸಿದ ಯುವಕ - ಸಂಚಾರ ನಿಯಮ ಉಲ್ಲಂಘನೆ ಪ್ರಕರಣದ ದಂಡ
ಹುಬ್ಬಳ್ಳಿ :ವಾಹನ ಚಾಲಕರು ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಬಾಕಿ ಉಳಿಸಿಕೊಂಡಿರುವ ದಂಡ ತುಂಬಲು ಸರ್ಕಾರ ನೀಡಿರುವ ಶೇಕಡಾ 50ರಷ್ಟು ರಿಯಾಯಿತಿಗೆ ಇಂದು(ಫೆ.11) ಕೊನೆಯ ದಿನವಾಗಿದೆ. ಹೀಗಾಗಿ ವಾಹನ ಸವಾರರು ಈ ಅವಕಾಶದ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ವಾಹನ ಸವಾರನೊಬ್ಬ 57 ಪ್ರಕರಣಗಳ ದಂಡವನ್ನು ಪಾವತಿ ಮಾಡಿದ್ದಾನೆ. ನಗರದ ಹಳೆ ಕೋರ್ಟ್ ಸರ್ಕಲ್ ಬಳಿ ಹುಬ್ಬಳ್ಳಿ ನಿವಾಸಿಯಾಗಿರುವ ಯುವಕನೊಬ್ಬ ಸುಮಾರು ಬಾಕಿ ಇದ್ದ 28,500 ರೂಪಾಯಿಗೆ ರಿಯಾಯಿತಿಯಾಗಿ 14,250 ರೂಪಾಯಿ ದಂಡ ಪಾವತಿಸಿದ್ದಾನೆ.
ಹುಬ್ಬಳ್ಳಿ ಪೂರ್ವ ಸಂಚಾರಿ ಠಾಣೆ ಎಎಸ್ಐ ಬಿ.ಬಿ ಮಾಯಣ್ಣವರ ಹಾಗೂ ಶಂಭು ರೆಡ್ಡರ್, ಕುಬೇರ ಕಾರಬಾರಿ ಸಂಚಾರಿ ಪೊಲೀಸರು ನಗರದ ಹಳೆ ಕೋರ್ಟ್ ಸರ್ಕಲ್ ಬಳಿ ದಂಡ ತುಂಬಿಸಿಕೊಂಡಿದ್ದಾರೆ.