ಕರ್ನಾಟಕ

karnataka

ಯೋಗಾಭ್ಯಾಸದ ವೇಳೆ ಕಾಣಿಸಿಕೊಂಡ ಎದೆ ನೋವು: ವ್ಯಕ್ತಿ ಹಠಾತ್​ ಸಾವು

ETV Bharat / videos

ಯೋಗಾಭ್ಯಾಸದ ವೇಳೆ ಕಾಣಿಸಿಕೊಂಡ ಎದೆ ನೋವು: ವ್ಯಕ್ತಿ ಹಠಾತ್​ ಸಾವು - ಕಿರಣ್ ಹರೇ ಕೃಷ್ಣ ಫಾರಂ

By

Published : Mar 9, 2023, 7:09 PM IST

ಸೂರತ್ (ಗುಜರಾತ್​): ಯೋಗ ಮಾಡುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡು ವ್ಯಕ್ತಿಯೊಬ್ಬರು ಹಠಾತ್​ ಆಗಿ ಸಾವನ್ನಪ್ಪಿರುವ ಘಟನೆ ಗುಜರಾತ್​ನ​ ಸೂರತ್​ನಲ್ಲಿ ನಡೆದಿದೆ. 44 ವರ್ಷದ ಮುಖೇಶ್‌ಭಾಯ್​ ಎಂಬುವವರೇ ಮೃತರು ಎಂದು ಗುರುತಿಸಲಾಗಿದೆ. ಇಲ್ಲಿನ ವರಚಾ ಪ್ರದೇಶದ ಹೀರಾಬಾಗ್ ವೃತ್ತದ ಬಳಿಯ ಸಂತಾಲಾಲ್ ಸೊಸೈಟಿಯಲ್ಲಿ ವಾಸಿಸುತ್ತಿದ್ದ ಮುಖೇಶ್‌ಭಾಯ್, ಕಿರಣ್ ಹರೇ ಕೃಷ್ಣ ಫಾರಂನಲ್ಲಿ ಯೋಗಾಭ್ಯಾಸಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.

ಬುಧವಾರ ಯೋಗಾಭ್ಯಾಸಕ್ಕೆ ಬಂದಿದ್ದ ಮುಖೇಶ್‌ಭಾಯ್ ಅಸಿಡಿಟಿ ಆಗಿ ಎಂದು ಏಕಾಏಕಿ ಹಾಸಿಗೆಯ ಮೇಲೆ ಮಲಗಿದ್ದರು. ತಕ್ಷಣವೇ ಜೊತೆಗಿದ್ದವರು ನೀರು ಕುಡಿಸಿದ್ದಾರೆ. ಆದರೆ, ನಂತರ ವಾಂತಿಭೇದಿ ಮಾಡಿಕೊಂಡ ಹಿನ್ನೆಲೆ ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆಸ್ಪತ್ರೆಗೆ ರವಾನಿಸುವಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಈ ಬಗ್ಗೆ ಯೋಗ ಸದಸ್ಯರಾದ ಜಾಸ್ಮಿನ್ ಗೋರ್ಶಿಯಾ ಮಾತನಾಡಿ, ಮುಖೇಶ್‌ಭಾಯ್ ತಮ್ಮ ಪತ್ನಿಯೊಂದಿಗೆ ಯೋಗ ತರಗತಿಗೆ ಬರುತ್ತಿದ್ದರು. ಬುಧವಾರ ಅಸ್ವಸ್ಥರಾದ ತಕ್ಷಣವೇ ನಾವು ನೀರು ಕೊಟ್ಟಾಗ ವಾಂತಿ ಮಾಡಿಕೊಂಡರು. ಹೀಗಾಗಿ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ, ವೈದ್ಯರು ಪರೀಕ್ಷಿಸಿ ಹೃದಯ ಸ್ತಬ್ಧವಾಗಿದೆ ಎಂಬುವುದಾಗಿ ತಿಳಿಸಿದರು ಎಂದು ಮಾಹಿತಿ ನೀಡಿದರು.

ಕಪೋದ್ರಾ ಪೊಲೀಸ್ ಠಾಣೆಯ ಸಬ್​ ಇನ್ಸ್‌ಪೆಕ್ಟಕ್​ ಪಿಎಸ್ ಭೇದಾ ಮಾತನಾಡಿ, ಬೆಳಗ್ಗೆ ಏಳು ಗಂಟೆಗೆ ಈ ಘಟನೆ ನಡೆದಿದೆ. ಈ ಬಗ್ಗೆ ಡೈಮಂಡ್ ಆಸ್ಪತ್ರೆಯಿಂದ ನಮಗೆ ಕರೆ ಬಂದಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ ಯೋಗ ಮಾಡುವಾಗ ಎದೆನೋವು ಕಾಣಿಸಿಕೊಂಡು ಮೃತಪಟ್ಟಿರುವುದು ದೃಢವಾಗಿದೆ. ಸದ್ಯ ಈ ಘಟನೆ ಮತ್ತಷ್ಟು ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ:ಹೋಳಿಯಲ್ಲಿ ಪ್ರತ್ಯೇಕ ದುರ್ಘಟನೆ: ಡ್ಯಾನ್ಸ್​ ಮಾಡುತ್ತಲೇ ಯುವಕ ಸಾವು, ದಲಿತ ಯವಕರ ಮೇಲೆ ಸಂಸದನ ಸಹೋದರನಿಂದ ಹಲ್ಲೆ ಆರೋಪ

ABOUT THE AUTHOR

...view details