ಕರ್ನಾಟಕ

karnataka

3 ದಶಕದ ಹಿಂದೆ ಸನ್ಯಾಸ ಸ್ವೀಕರಿಸಿದ್ದ ವಿಡಿಯೋ ಹಂಚಿಕೊಂಡ ಬಾಬಾ ರಾಮ್​ದೇವ್​​

ETV Bharat / videos

3 ದಶಕದ ಹಿಂದೆ ಸನ್ಯಾಸತ್ವ ಸ್ವೀಕರಿಸಿದ್ದ ವಿಡಿಯೋ ಹಂಚಿಕೊಂಡ ಬಾಬಾ ರಾಮ್​ದೇವ್​​ - ಈಟಿವಿ ಭಾರತ ಕನ್ನಡ

By

Published : Apr 1, 2023, 8:40 PM IST

ಹರಿದ್ವಾರ (ಉತ್ತರಾಖಂಡ) : ಖ್ಯಾತ ಯೋಗ ಗುರು ಬಾಬಾರಾಮ್​​ದೇವ್​​ ಅವರು ತಾವು ಸುಮಾರು ಮೂರು ದಶಕಗಳ ಹಿಂದೆ ಸನ್ಯಾಸ ದೀಕ್ಷೆ ಪಡೆದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಾಬಾ ರಾಮ್​ದೇವ್​ ತಮ್ಮ ಪತಂಜಲಿ ಯೋಗ ಪೀಠದಲ್ಲಿ ಸನ್ಯಾಸ ದೀಕ್ಷಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ವಿವಿಧೆಡೆಯಿಂದ ಸಾಧು, ಸನ್ಯಾಸಿಗಳು ಆಗಮಿಸಿದ್ದರು. ಜೊತೆಗೆ ರಾಜಕೀಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ನಡುವೆ ತಾವು ಸನ್ಯಾಸ ಸ್ವೀಕರಿಸಿದ ಹಳೆಯ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಾಬಾ ರಾಮ್​ ದೇವ್​ ಅವರು 1995ರ ಎಪ್ರಿಲ್​ 5ರ ರಾಮನವಮಿಯಂದು ಸನ್ಯಾಸ ದೀಕ್ಷೆ ಪಡೆದಿದ್ದರು. ಈ ವಿಡಿಯೋದಲ್ಲಿ ಬಾಬಾ ರಾಮ್​ದೇವ್​ ಸನ್ಯಾಸ ದೀಕ್ಷೆ ಪಡೆಯುತ್ತಿರುವುದನ್ನು ಕಾಣಬಹುದು. ಈ ಕಾರ್ಯಕ್ರಮದಲ್ಲಿ ಬಾಬಾ ರಾಮ್​ದೇವ್​ ಅವರೊಂದಿಗೆ ಆಚಾರ್ಯ ಬಾಲಕೃಷ್ಣ ಕೂಡ ಇದ್ದಾರೆ. ಈ ವಿಡಿಯೋದಲ್ಲಿ ಕೃಪಾಲು ಭಾಗ್​​ನಲ್ಲಿ ಬಾಬಾ ರಾಮ್​ದೇವ್​ ಯೋಗ ತರಬೇತಿ ನೀಡುತ್ತಿರುವುದನ್ನು ಕಾಣಬಹುದು.

ಈ ಬಗ್ಗೆ ಮಾತನಾಡಿರುವ ಬಾಬಾ ರಾಮ್​ದೇವ್​, ತಮ್ಮ ಜೀವನದಲ್ಲಿ ಎದುರಿಸಿರುವ ಕಷ್ಟದ ಬಗ್ಗೆ ಹಂಚಿಕೊಂಡಿದ್ದಾರೆ. 3 ದಶಕಗಳ ಹಿಂದೆ ನಾನು ಒಬ್ಬನೇ ಯೋಗ ಮಾಡುತ್ತಿದ್ದೆ. ಕ್ರಮೇಣ ಜನರು ಯೋಗ ಮಾಡಲು ಶುರು ಮಾಡಿದರು. ಜೊತೆಗೆ ಅಳವಡಿಸಿಕೊಳ್ಳಲು ಪ್ರಾರಂಭಿಸಿದರು. ಈಗ ಇಡೀ ವಿಶ್ವವೇ ಯೋಗದಿನ ಆಚರಿಸುತ್ತಿದೆ. ಇಡೀ ವಿಶ್ವವೇ ಯೋಗವನ್ನು ಅಳವಡಿಸಿಕೊಳ್ಳುತ್ತಿದೆ. ನಾನು ನನ್ನ ಗುರುಗಳಿಗೆ ಕೊಟ್ಟಿರುವ ಮಾತು ಇಂದು ನಿಜವಾಗುತ್ತಿದೆ. ಇನ್ನೂ ನಾವು ಮನೆ ಮನೆಗೂ ಯೋಗವನ್ನು ತಲುಪಿಸಬೇಕಾಗಿದೆ. ಯೋಗದಿಂದ ಭಾರತ ಮಾತ್ರವಲ್ಲದೆ ಇಡೀ ವಿಶ್ವವನ್ನು ಸ್ವಸ್ಥ ಮಾಡಬೇಕಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ :ಮತ್ತೆ ಹಿಮಾಪಾತ: ಬರಿನಾಥ ಧಾಮ ಹಿಮಾವೃತ

ABOUT THE AUTHOR

...view details