ಕರ್ನಾಟಕ

karnataka

ಯಡಿಯೂರಪ್ಪನವರ ಮೊಮ್ಮಕ್ಕಳು

ETV Bharat / videos

ಮೊದಲ ಮತದಾನದ ಅನುಭವ ಹಂಚಿಕೊಂಡ ಯಡಿಯೂರಪ್ಪ ಮೊಮ್ಮಕ್ಕಳು - ಮತದಾನ

By

Published : May 10, 2023, 4:58 PM IST

ಶಿವಮೊಗ್ಗ: ಮತದಾನ ಮಾಡುವುದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯ‌. ವೋಟಿಂಗ್​ ಮಾಡುವ ಮೂಲಕ ಸುಭದ್ರ ದೇಶವನ್ನು ಕಟ್ಟುವ ಕಾರ್ಯಕ್ಕೆ ಕೈ ಜೋಡಿಸುವುದು ಮುಖ್ಯವಾಗುತ್ತದೆ. ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸಾವಿರಾರು ಯುವಕರು ತಮ್ಮ ಮೊದಲ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. 

ಅಂತೆಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಕ್ಕಳಾದ ಬಿ.ವೈ. ವಿಜಯೇಂದ್ರ ಅವರ ಪುತ್ರಿ ಮೈತ್ರಿ, ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ಪುತ್ರ ಭಗತ್ ಅವರು ಇದೇ ಮೊದಲ ಬಾರಿಗೆ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಭಗತ್​ ಮತದಾನದ ನಂತರ ಪ್ರತಿಕ್ರಿಯಿಸಿ ನಾನು ಮೊದಲ ಮತದಾನ ಮಾಡಿದ್ದು ಖುಷಿಯಾಗಿದೆ. ನಮ್ಮ ಚಿಕ್ಕಪ್ಪ ಈ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಅದೇ ರೀತಿ ಬಿ. ವೈ. ವಿಜಯೇಂದ್ರ ಅವರ ಪುತ್ರಿ ಮೈತ್ರಿ ಮಾತನಾಡಿ, ನಾನು ನನ್ನ ಮೊದಲ ಮತವನ್ನು ಸಂತೋಷ ತಂದಿದೆ. ನಮ್ಮ ತಂದೆ ಗೆದ್ದರೆ ಸಾಕಷ್ಟು ಒಳ್ಳೆಯ ಕೆಲಸವನ್ನು ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು. ನಮ್ಮ ತಾತನವರಂತೆ ನಮ್ಮ ತಂದೆ ಸಹ ಸಾಕಷ್ಟು ಅಭಿವೃದ್ಧಿ ಮಾಡಲಿದ್ದಾರೆ. ಎಲ್ಲಾ ಯುವಕರು ಮನೆ ಬಿಟ್ಟು ಹೊರ ಬಂದು ಮತದಾನ ಮಾಡಿ ಎಂದರು.

ಇದನ್ನೂ ಓದಿ:ಮಂಗಳೂರು: ಮೊದಲ ಬಾರಿಗೆ ಮತ ಹಕ್ಕು ಚಲಾಯಿಸಿದ ಯುವ ಮತದಾರರು ಫುಲ್ ಖುಷ್

ABOUT THE AUTHOR

...view details