ಯುವಗಲಂ ಪಾದಯಾತ್ರೆ ಮತ್ತೆ ಪ್ರಾರಂಭ: ಮೊದಲ ದಿನವೇ ನಾರಾ ಲೋಕೇಶ್ ಬೆಂಬಲಕ್ಕೆ ನಿಂತ 20,000 ಜನ
Published : Nov 27, 2023, 5:05 PM IST
|Updated : Nov 27, 2023, 5:43 PM IST
ರಾಜೋಲೆ (ಪೂರ್ವ ಗೋದಾವರಿ): 79 ದಿನಗಳ ಸುದೀರ್ಘ ಅಂತರದ ನಂತರ ತೆಲುಗು ದೇಶಂ ಪಕ್ಷದ (ಟಿಡಿಪಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಕೈಗೊಂಡಿರುವ ಯುವಗಲಂ ಪಾದಯಾತ್ರೆ ಮತ್ತೆ ಪ್ರಾರಂಭಗೊಂಡಿದೆ. ಪಾದಯಾತ್ರೆ ಪ್ರಾರಂಭಗೊಳ್ಳುತ್ತಿದ್ದಂತೆ ಬಹುಸಂಖ್ಯೆಯ ಬೆಂಬಲಿಗರಿಂದ ನಾರಾ ಲೋಕೇಶ್ ಅವರಿಗೆ ಅಭೂತಪೂರ್ವ ಸ್ವಾಗತ ಕೂಡಾ ಸಿಕ್ಕಿದೆ. ಪಾದಯಾತ್ರೆಯಲ್ಲಿ ಸುಮಾರು 20,000 ಜನರು ಪಾಲ್ಗೊಳ್ಳುವ ಮೂಲಕ ಬೆಂಬಲ ಸೂಚಿಸಿದ್ದಾರೆ.
ಸೆ. 9 ರಂದು ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಬಂಧನ ಬಳಿಕ ಕೋನಸೀಮಾ ಜಿಲ್ಲೆಯ ರಾಜೋಲು ಕ್ಷೇತ್ರದ ಪೊದಲದ ಎಂಬಲ್ಲಿ ಅಂಬೇಡ್ಕರ್ ಅವರು ಪಾದಯಾತ್ರೆಗೆ ವಿರಾಮ ಘೋಷಿಸಿದ್ದರು. ಇದೀಗ ವಿರಾಮ ಘೋಷಿಸಿದ್ದ ಅದೇ ಸ್ಥಳದಿಂದ ಇಂದು ಮತ್ತೆ ಪಾದಯಾತ್ರೆ ಪ್ರಾರಂಭಗೊಂಡಿದೆ. ಪ್ರಸ್ತುತ ಜಗನ್ ಮೋಹನ್ ರೆಡ್ಡಿ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ರಾಜ್ಯದ ವಿವಿಧ ವರ್ಗದ ಜನರೊಂದಿಗೆ ಲೋಕೇಶ್ ಸಂವಾದ ನಡೆಸಲಿದ್ದಾರೆ. ರಾಜೋಲೆ ವಿಧಾನಸಭಾ ಕ್ಷೇತ್ರದಿಂದ ನಾರಾ ಲೋಕೇಶ್ ಪ್ರಯಾಣ ಪ್ರಾರಂಭಿಸಿದ್ದು, ತಾಟಿಪಾಕ ಕೇಂದ್ರದಲ್ಲಿ ಈ ದಿನದ ಭಾಷಣ ಮಾಡಲಿದ್ದಾರೆ. ಮಾಮಿಡಿ ಕುದೂರಿನಲ್ಲಿ ಸ್ಥಳೀಯರೊಂದಿಗೆ ಸಂವಾದ ನಡೆಸಲಿದ್ದು, ಅಂತಿಮವಾಗಿ ಪೆರೂರು ಪಂಚಾಯತ್ನಲ್ಲಿ ಮೊದಲ ದಿನದ ಪ್ರಯಾಣ ಮುಕ್ತಾಯಗೊಳಿಸಲಿದ್ದಾರೆ.
ಇದನ್ನೂ ಓದಿ:ಕೌಶಲಾಭಿವೃದ್ಧಿ ಹಗರಣ: ಚಂದ್ರಬಾಬುಗೆ ಜಾಮೀನು ಪ್ರಶ್ನಿಸಿ ಸುಪ್ರೀಂಗೆ ಆಂಧ್ರ ಸರ್ಕಾರದ ಅರ್ಜಿ