ಕರ್ನಾಟಕ

karnataka

ಸಚಿವ ಶಿವಾನಂದ ಪಾಟೀಲ್​

ETV Bharat / videos

ಯತ್ನಾಳರಿಗೆ ಮಾತಾಡುವ ಚಪಲ: ಸಚಿವ ಶಿವಾನಂದ ಪಾಟೀಲ್​ ತಿರುಗೇಟು - ಈಟಿವಿ ಭಾರತ್ ಕನ್ನಡ ಸುದ್ದಿ

By

Published : Aug 20, 2023, 8:23 PM IST

ಕಲಬುರಗಿ : ಬಸನಗೌಡ ಪಾಟೀಲ್ ಯತ್ನಾಳ್​ಗೆ ಮಾತನಾಡುವ ಚಪಲ ಹೆಚ್ಚು, ಹಾಗಾಗಿ ಮಾತಾಡ್ತಾರೆ. ಅವರು ಹಿಂದೆ ಹೇಳಿದ್ದು ಆಗಿಲ್ಲ, ಈಗ ಹೇಳಿದ್ದೂ ಆಗುವುದಿಲ್ಲ ಎಂದು ಆರು ತಿಂಗಳಲ್ಲಿ ಸರ್ಕಾರ ಉರುಳುತ್ತೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಜವಳಿ‌ ಖಾತೆ ಸಚಿವ ಶಿವಾನಂದ ಪಾಟೀಲ್ ತಿರುಗೇಟು ನೀಡಿದ್ದಾರೆ. 

ನಗರದಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರಿಗೆ ಈ ರೀತಿ ಹೇಳಿಕೆ ನೀಡುವ ಚಟ ಇದೆ. ಕಾಂಗ್ರೆಸ್ ಬಲಿಷ್ಠವಾಗಿದೆ. ಪಕ್ಷ ಬಿಟ್ಟು ಹೋಗುವವರು ಯಾರೂ ಇಲ್ಲ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಹಲವರು ತಯಾರಾಗಿದ್ದಾರೆ. ಪಕ್ಷದ ಅಧ್ಯಕ್ಷರು, ಕೇಂದ್ರ ನಾಯಕರು ಚರ್ಚಿಸಿ ಮುಂದಿನ ಕ್ರಮ ಜರುಗಿಸ್ತಾರೆ ಎಂದರು. 

ಬಿಜೆಪಿಯಲ್ಲಿ ಇಲ್ಲಿವರೆಗೆ ಯಾರೊಬ್ಬರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿಲ್ಲ. ಅಧಿವೇಶನದ ಇತಿಹಾಸದಲ್ಲಿ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನಿಲ್ಲದೆ ಅಧಿವೇಶನ ಮುಗಿದಿದೆ. ಕನಿಷ್ಠ ಅಧಿವೇಶನ ನಡೆದಾಗಲಾದರೂ ವಿರೋಧ ಪಕ್ಷದ ನಾಯಕನನ್ನ ನೇಮಿಸಬೇಕಿತ್ತು. ಈಗ ಇನ್ನೊಂದು ಅಧಿವೇಶನ ಬರುವ ಹಂತ ಬಂದಿದೆ. ಆದರೂ ವಿರೋಧ ಪಕ್ಷದ ನಾಯಕರಿಲ್ಲ. ಯತ್ನಾಳ್​ ಅವರು ಮೊದಲು ವಿರೋಧ ಪಕ್ಷದ ನಾಯಕರಾಗಿ ಬರಲಿ. ಅನಂತರ ಮಾತನಾಡಲಿ. ಇತಿಮಿತಿಯಲ್ಲಿ ಮಾತನಾಡಿದರೆ ಒಳ್ಳೆಯದು ಎಂದು ಯತ್ನಾಳ್​ಗೆ ಸಚಿವ ಶಿವಾನಂದ ಪಾಟೀಲ್ ಕಿವಿಮಾತು ಹೇಳಿದರು.

ಇದನ್ನು ಓದಿ:ಕಾಂಗ್ರೆಸ್‌ನ​​ ಒಬ್ಬ ಶಾಸಕರಾದರೂ​ ಯತ್ನಾಳ್​ ಸಂಪರ್ಕದಲ್ಲಿದ್ದಾರಾ?: ಸಚಿವ ಶಿವಾನಂದ ಪಾಟೀಲ್

ABOUT THE AUTHOR

...view details