ಉತ್ತರಾಖಂಡದಲ್ಲಿ ಧಾರಾಕಾರ ಮಳೆ: ಭೂಕುಸಿತ - ಯಮುನೋತ್ರಿ ಹೆದ್ದಾರಿ ಬಂದ್! - ಉತ್ತರಾಖಂಡ ಭೂಕುಸಿತ
ಉತ್ತರಕಾಶಿ(ಉತ್ತರಾಖಂಡ): ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಹಲವು ಮಾರ್ಗಗಳಲ್ಲಿ ಭೂಕುಸಿತ, ಪ್ರವಾಹವಾಗಿದೆ. ಖನೇಡಾ ಸೇತುವೆ ಬಳಿ ಭೂಕುಸಿತವಾದ ಹಿನ್ನೆಲೆ ಯಮುನೋತ್ರಿ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ. ಇಂದು ಬೆಳಗ್ಗೆಯಿಂದಲೇ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಯಮುನೋತ್ರಿ ಧಾಮಕ್ಕೆ ತೆರಳುವ ಯಾತ್ರಾರ್ಥಿಗಳು ಪರದಾಡುತ್ತಿದ್ದಾರೆ. ಆದರೆ, ಆಡಳಿತ ಹೆದ್ದಾರಿ ತೆರೆಯುವಲ್ಲಿ, ದಾರಿ ಸುಗಮಗೊಳಿಸುವಲ್ಲಿ ನಿರತವಾಗಿದೆ. ಭೂಕುಸಿತದ ವಿಡಿಯೋವೊಂದು ಲಭ್ಯವಾಗಿದ್ದು ಭಯ ಹುಟ್ಟಿಸಿದೆ.
Last Updated : Feb 3, 2023, 8:24 PM IST