ಕರ್ನಾಟಕ

karnataka

ಗುರುಕುಲ ಶಾಲೆ ಮಕ್ಕಳು

By ETV Bharat Karnataka Team

Published : Nov 17, 2023, 10:40 PM IST

ETV Bharat / videos

ಹೈ ವೋಲ್ಟೇಜ್‌ ವಿಶ್ವಕಪ್‌ ಕ್ರಿಕೆಟ್‌ ಫೈನಲ್: ಗೆದ್ದು ಬಾ ಇಂಡಿಯಾ ಎಂದು ಶುಭ ಹಾರೈಸಿದ ಮಕ್ಕಳು

ದಾವಣಗೆರೆ: ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್​ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಹೈ ವೋಲ್ಟೇಜ್‌ ಪಂದ್ಯ ನವೆಂಬರ್ 19 ರಂದು ನಡೆಯಲಿದೆ. ಭಾರತ ಕ್ರಿಕೆಟ್ ತಂಡ ಗೆಲುವಿಗಾಗಿ ದಾವಣಗೆರೆ ಗುರುಕುಲ ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿ ಇಂದು ತ್ರಿವರ್ಣ ಧ್ವಜ ಹಿಡಿದು ಅಲ್ ದಿ ಬೆಸ್ಟ್ ಇಂಡಿಯಾ, ಗೆದ್ದು ಬಾ ಇಂಡಿಯಾ ಎಂದು ಘೋಷಣೆ ಕೂಗಿ ಶುಭ ಹಾರೈಸಿದರು.  

ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಭಾರತ ಫೈನಲ್‌ ಪ್ರವೇಶಿಸಿದೆ. ದಕ್ಷಿಣ ಆಫ್ರಿಕಾವನ್ನು ಸೆಮಿಫೈನಲ್​​​ನಲ್ಲಿ ಆಸ್ಟ್ರೇಲಿಯಾ ಸೋಲಿಸುವ ಮೂಲಕ ಫೈನಲ್​ಗೆ ಪ್ರವೇಶ ಮಾಡಿದೆ. ನವೆಂಬರ್ 19ರಂದು ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಹೈ ವೋಲ್ಟೇಜ್‌ ಪಂದ್ಯ ನಡೆಯಲಿದೆ.

ಇಂದು ಗುರುಕುಲ ಶಾಲೆಯ ಆವರಣದಲ್ಲಿ ಜಮಾಯಿಸಿದ ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿ ತ್ರಿವರ್ಣ ಧ್ವಜ ಹಿಡಿದು ಅಲ್ ದಿ ಬೆಸ್ಟ್ ಇಂಡಿಯಾ ಗೆದ್ದು ಬಾ ಇಂಡಿಯಾ ಎಂದು ಘೋಷಣೆ ಕೂಗಿ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ತರುಣ್ ಮಾತನಾಡಿ, ನಮ್ಮ ಭಾರತ ತಂಡ ಎರಡು ಬಾರಿ ವರ್ಲ್ಡ್ ಕಪ್ ಗೆದ್ದಿದೆ. ಈ  ಬಾರಿಯೂ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಗೆಲ್ಲುವ ವಿಶ್ವಾಸವಿದೆ. ಅಲ್ ದಿ ಬೆಸ್ಟ್ ಇಂಡಿಯಾ ಟಿಂ ಇಂಡಿಯಾ ಗೆದ್ದು ಬಾ ಎಂದು ಶುಭ ಕೋರಿದರು.  ಗುರುಕುಲ ಶಾಲೆಯ ಸೆಕ್ರೆಟರಿ ಅಬ್ದುಲ್ ಮಾತನಾಡಿ, ಭಾರತದ ಪ್ರತಿಯೊಬ್ಬ ನಾಗರಿಕರು ಹಾಗೂ ಕ್ರಿಕೆಟ್ ಅಭಿಮಾನಿಗಳು ಬ್ಲೂ ಬಾಯ್ಸ್ ಕಾಂಗರೋ ನಡುವಿನ ಪಂದ್ಯ ವೀಕ್ಷಣೆಗೆ ಕಾತರರಾಗಿದ್ದಾರೆ. ನಾವು ಪಂದ್ಯ ನೋಡಲು ಕಾತುರರಾಗಿದ್ದೇವೆ. ಈ ಬಾರಿಯ ವರ್ಲ್ಡ್ ಕಪ್ ನಮ್ಮ ಭಾರತದ್ದೇ, ಹತ್ತು ಪಂದ್ಯ ಗೆಲ್ಲುವ ಮೂಲಕ ಫೈನಲ್ ಗೆ ಭಾರತ ಬಂದಿದೆ‌ ಎಂದರು. 

ಈ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಮಕ್ಕಳು ಗೆದ್ದು ಬಾ ಭಾರತ.. ಎಂದು ಘೋಷಣೆ ಕೂಗಿ ಶುಭ ಕೋರಿದರು. 

ಇದನ್ನೂಓದಿ:ಭಾರತ-ನ್ಯೂಜಿಲೆಂಡ್ ವಿಶ್ವಕಪ್ ಸೆಮಿಫೈನಲ್: ಭಾರತಕ್ಕೆ ಚೀಯರ್ ಅಪ್ ಹೇಳಿದ ಕ್ರಿಕೆಟ್​ ಪ್ರೇಮಿಗಳು

ABOUT THE AUTHOR

...view details