ಕರ್ನಾಟಕ

karnataka

ಭಾರತ ಗೆಲ್ಲಲೆಂದು ಪ್ರಾರ್ಥಿಸಿದ ಮೊಹಮ್ಮದ್ ಶಮಿ ಹಳ್ಳಿಯ ನಿವಾಸಿಗಳು

ETV Bharat / videos

ಭಾರತದ ಗೆಲುವಿಗೆ ಪ್ರಾರ್ಥಿಸಿದ ಮೊಹಮ್ಮದ್ ಶಮಿ ಹಳ್ಳಿಯ ಜನರು: ವಿಡಿಯೋ - ವಿಶ್ವಕಪ್ ಕ್ರಿಕೆಟ್ ಫೈನಲ್

By ETV Bharat Karnataka Team

Published : Nov 19, 2023, 12:20 PM IST

ಉತ್ತರ ಪ್ರದೇಶ:ವಿಶ್ವಕಪ್ ಕ್ರಿಕೆಟ್ ಫೈನಲ್​ಗೆ ಕ್ಷಣಗಣನೆ ಪ್ರಾರಂಭವಾಗಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಜಯ ಗಳಿಸಲಿ ಎಂದು ಉತ್ತರ ಪ್ರದೇಶದ ಅಮ್ರೋಹಾದಲ್ಲಿರುವ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಹಳ್ಳಿಯಲ್ಲಿ ಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸಿದರು.  

ಈ ವೇಳೆ ಮಾತನಾಡಿದ ಸ್ಥಳೀಯರೊಬ್ಬರು, "ಇಂದಿನ ಪಂದ್ಯದಲ್ಲಿ ಬ್ಯಾಟರ್‌ಗಳು ಮತ್ತು ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಲಿ ಎಂದು ನಿವಾಸಿಗಳು ಪ್ರಾರ್ಥಿಸಿದರು. ನಮ್ಮ ಆಟಗಾರರು ಉತ್ತಮ ಪ್ರದರ್ಶನ ನೀಡಲಿ, ನಾವು ವಿಶ್ವಕಪ್ ಗೆಲ್ಲುತ್ತೇವೆ ಎಂಬ ನಂಬಿಕೆ ಇದೆ" ಅಂತಾ ಹೇಳಿದರು.

ಇದನ್ನೂ ಓದಿ: ಬೆನ್ನ ಹಿಂದೆ ಬಂಡೆಯಂತಿರುವ ಕೋಚ್​ ದ್ರಾವಿಡ್​ಗಾಗಿ ಕಪ್​ ಗೆಲ್ಲುತ್ತೇವೆ : ರೋಹಿತ್​ ಶರ್ಮಾ

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಶಮಿ, ಕಿವೀಸ್ ವಿರುದ್ಧ ದಾಖಲೆಯ 7 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿದ್ದರು.

ಇದನ್ನೂ ಓದಿ:ನಾವು ಇಂದು ವಿಶ್ವಕಪ್‌ ಎತ್ತಿ ಹಿಡಿಯುವ ಭರವಸೆ ಇದೆ : ಸಚಿನ್ ತೆಂಡೂಲ್ಕರ್

ABOUT THE AUTHOR

...view details