ಕಲಬುರಗಿ: ಸೇಲ್ಸ್‌ಮನ್ ಗಮನ ಬೇರೆಡೆ ಸೆಳೆದು ಚಿನ್ನದ ಬಳೆ ಕಳವು-ವಿಡಿಯೋ - ಬುರ್ಖಾಧಾರಿ ಮಹಿಳೆಯರು
Published : Nov 24, 2023, 6:32 AM IST
ಕಲಬುರಗಿ: ಸೇಲ್ಸ್‌ಮನ್ ಗಮನ ಬೇರೆಡೆ ಸೆಳೆದ ಇಬ್ಬರು ಬುರ್ಖಾ ಧರಿಸಿದ್ದ ಮಹಿಳೆಯರು ಚಿನ್ನ ಕದ್ದಿರುವ ಘಟನೆ ಕಲಬುರಗಿಯ ಮಲಬಾರ್ ಗೋಲ್ಡ್ ಡೈಮಂಡ್ ಮಳಿಗೆಯಲ್ಲಿ ಮಂಗಳವಾರ ನಡೆದಿದೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚಿನ್ನಾಭರಣದ ಅಂಗಡಿಗೆ ಖರೀದಿ ನೆಪದಲ್ಲಿ ಬಂದಿದ್ದ ಈ ಮಹಿಳೆಯರು ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಬಳೆಗಳನ್ನು ಎಗರಿಸಿ ಪರಾರಿಯಾಗಿದ್ದಾರೆ. 38 ಗ್ರಾಂನ 2 ಬಳೆಗಳು ಕಳುವಾಗಿವೆ ಎಂದು ಅಂಗಡಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಇದಕ್ಕೂ ಮುನ್ನ ಬಳೆ ನಾಪತ್ತೆಯಾಗಿರುವುದನ್ನು ಗಮನಿಸಿದ ಮಾಲೀಕರು ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಆಗ ಘಟನೆ ಬೆಳಕಿಗೆ ಬಂದಿದೆ. ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಎಫ್‌ಐಆರ್ ದಾಖಲಾಗಿದೆ.
ದೇವಸ್ಥಾನದಲ್ಲಿ ಚಿನ್ನ ಕಳವು: ಒಂದೇ ರಾತ್ರಿ ಎರಡು ದೇವಸ್ಥಾನಕ್ಕೆ ನುಗ್ಗಿದ್ದ ಕಳ್ಳರು 5 ಮಾಂಗಲ್ಯ ಸರ, 18 ಚಿನ್ನದ ಗುಂಡುಗಳನ್ನು ಕದ್ದು ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹಾದ್ರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಹೆಜ್ಜಾಜಿ ಗ್ರಾಮದಲ್ಲಿ (ಸೆಪ್ಟೆಂಬರ್ 24-2023) ನಡೆದಿತ್ತು.
ಇದನ್ನೂ ಓದಿ:ದೊಡ್ಡಬಳ್ಳಾಪುರ: ಎರಡು ದೇವಸ್ಥಾನಗಳಲ್ಲಿ 5 ಮಾಂಗಲ್ಯ ಸರ, 18 ಚಿನ್ನ ಗುಂಡುಗಳು ಕಳವು