ಕಾರವಾರ: ಪ್ರವಾಸಕ್ಕೆ ಬಂದು ಉಚಿತ ಬಸ್ ಸಿಗದೆ ಪರದಾಡಿದ ಮಹಿಳೆಯರು
ಕಾರವಾರ: ಉಚಿತ ಬಸ್ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಧಾರ್ಮಿಕ ಸ್ಥಳಗಳಿಗೆ ಆಗಮಿಸಿದ ಮಹಿಳೆಯರ ಪೈಕಿ 40ಕ್ಕೂ ಹೆಚ್ಚು ಮಹಿಳೆಯರು ಸಂಜೆ ವೇಳೆಗೆ ಮನೆಗೆ ತೆರಳಲು ಬಸ್ ಇಲ್ಲದೆ ಪರದಾಡಿದ ಘಟನೆ ಹೊನ್ನಾವರ ಬಸ್ ನಿಲ್ದಾದಲ್ಲಿ ನಡೆದಿದೆ. ಉಚಿತ ಬಸ್ ಹಿನ್ನೆಲೆಯಲ್ಲಿ ವಾರಾಂತ್ಯದ ದಿನವಾದ ಭಾನುವಾರ ಜಿಲ್ಲೆಯ ವಿವಿಧ ಧಾರ್ಮಿಕ ಸ್ಥಳಗಳಿಗೆ ಹೆಚ್ವಿನ ಸಂಖ್ಯೆಯಲ್ಲಿ ಜನರು ಹರಿದು ಬಂದಿದ್ದರು. ಅದರಲ್ಲಿಯೂ ಬಹುತೇಕ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರೇ ಹೆಚ್ಚಾಗಿ ಕಂಡುಬಂದಿದ್ದಾರೆ.
ಗೋಕರ್ಣ, ಮುರುಡೇಶ್ವರ, ಇಡಗುಂಜಿ ಸೇರಿದಂತೆ ಧಾರ್ಮಿಕ ಸ್ಥಳ ಹಾಗೂ ಪ್ರವಾಸಿ ಕೇಂದ್ರಗಳಲ್ಲಿ ಮಹಿಳೆಯರು ಆಗಮಿಸಿದ ದೇವರ ದರ್ಶನದ ಪಡೆಯುವುದರ ಜೊತೆಗೆ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟರು. ಆದರೆ, ಇದೇ ರಿತಿ ಪ್ರವಾಸಕ್ಕೆ ಆಗಮಿಸಿದ್ದ ಮೈಸೂರು, ತುಮಕೂರು, ಮಂಡ್ಯ, ಹುಬ್ಬಳ್ಳಿ, ಹಾವೇರಿ, ಬೆಂಗಳೂರು ಭಾಗದ 40ಕ್ಕೂ ಹೆಚ್ಚು ಮಹಿಳೆಯರು ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದು ಸಂಜೆವರೆಗೂ ಸುತ್ತಾಟ ನಡೆಸಿದ್ದರು. ಆದರೆ ಸಂಜೆ ವೇಳೆಗೆ ಬಸ್ ನಿಲ್ದಾಣಕ್ಕೆ ಬಂದಾಗ ಬಸ್ ಇಲ್ಲದ ಸುದ್ದಿ ಕೇಳಿ ಕಂಗಾಲಾಗಿದ್ದರು.
ಈ ಬಗ್ಗೆ ಹೊನ್ನಾವರ ಬಸ್ ನಿಲ್ದಾಣದ ಕಂಟ್ರೊಲರ್ ಬಳಿ ಕೇಳಿದಾಗ, ಪ್ರವಾಸಕ್ಕೆ ಬಂದ ಮಹಿಳೆಯರು ಸಂಜೆ ವೇಳೆಗೆ ಆಗಮಿಸಿದ್ದರು. ಆದರೆ ಅದಾಗಲೇ ಕೆಲ ಬಸ್ಗಳು ತೆರಳಿದ್ದ ಕಾರಣ ಐರಾವತ ಸೇರಿದಂತೆ ಲಗ್ಸೂರಿ ಬಸ್ ಇರುವ ಬಗ್ಗೆ ತಿಳಿಸಲಾಗಿದೆ. ಕೆಲವರು ಆ ಬಸ್ ಏರಿ ತೆರಳಿದ್ದಾರೆ. ಇನ್ನುಳಿದವರಿಗೆ ಉಚಿತ ಸಾರಿಗೆ ಬಸ್ನಲ್ಲಿ ಕಳುಹಿಸಿರುವುದಾಗಿ ಮಾಹಿತಿ ನೀಡಿದ್ದಾರೆ.