ಚುಡಾಯಿಸುತ್ತಿದ್ದ ಯುವಕರನ್ನು ಚಪ್ಪಲಿ ಹಿಡ್ಕೊಂಡು ಅಟ್ಟಾಡಿಸಿ ಥಳಿಸಿದ ನಾರಿಯರು - Etv Bharat Karnataka news
ಉತ್ತರಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ಚುಡಾಯಿಸಿದ ಯುವಕರಿಗೆ ಮಹಿಳೆಯರು ಚಪ್ಪಲಿ ಹಿಡ್ಕೊಂಡು ಅಟ್ಟಾಡಿಸಿ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯರು ಥಳಿಸುತ್ತಿರುವುದನ್ನು ಸ್ಥಳಿಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ವೈರಲ್ ಆದ ವಿಡಿಯೋದಲ್ಲಿ ಇಬ್ಬರು ಮಹಿಳೆಯರು ಚಪ್ಪಲಿಯಿಂದ ಬೇರೆ ಬೇರೆ ಇಬ್ಬರು ಯುವಕರನ್ನು ಥಳಿಸುವುದು ಕಂಡುಬರುತ್ತದೆ. ಈ ಘಟನೆ ಗುರುವಾರ ಸಂಜೆ ಇಗ್ಲಾಸ್ ಪೊಲೀಸ್ ಠಾಣಾ ವ್ಯಾಪ್ತಿಯ ವೆಸ್ವಾನ್ ಪ್ರದೇಶದಲ್ಲಿ ನಡೆದಿದೆ ಎನ್ನಲಾಗ್ತಿದೆ. ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
Last Updated : Feb 3, 2023, 8:26 PM IST