ಕರ್ನಾಟಕ

karnataka

ಪೊಲೀಸ್​ ಠಾಣೆ ಮುಂದೆ 500ರ ನೋಟುಗಳನ್ನು ತೂರಿ ಮಹಿಳೆಯ ಆಕ್ರೋಶ

ETV Bharat / videos

ಲಂಚಬಾಕ ಪೊಲೀಸರ ವಿರುದ್ಧ ಆಕ್ರೋಶ​; ಠಾಣೆ ಎದುರು ಕಂತೆ ಕಂತೆ ನೋಟು ಎಸೆದು ಮಹಿಳೆಯ ಹತಾಶೆ- ವಿಡಿಯೋ

By

Published : Jun 16, 2023, 10:16 PM IST

ನೀಮಚ್ (ಮಧ್ಯ ಪ್ರದೇಶ): ಪೊಲೀಸರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಮಹಿಳೆಯೊಬ್ಬರು ಪೊಲೀಸ್​ ಠಾಣೆಯ ಮುಂದೆಯೇ ಕಂತೆ ಕಂತೆ ಹಣ ಎಸೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಧ್ಯಪ್ರದೇಶದ ನೀಮಚ್ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರು ಹಣ ಪಡೆಯದೇ ಜನಸಾಮಾನ್ಯರ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.

ಠಾಣೆ ಮುಂದೆ ಹಣ ತೂರಿದ ಮಹಿಳೆಯನ್ನು ರಾಜೀವ್ ನಗರದ ನಿವಾಸಿ ಶಾಂತಿದೇವಿ ಲೋಥ್ ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಇಲ್ಲಿನ ಕೆಂಟ್ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮುಖ್ಯ ರಸ್ತೆಯಲ್ಲಿ ಕೋಲು ಹಿಡಿದುಕೊಂಡು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಇದೇ ವೇಳೆ ತನ್ನ ಪರ್ಸ್​ನಲ್ಲಿದ್ದ 500 ರೂಪಾಯಿ ನೋಟುಗಳ ಬಂಡಲ್​ ಹೊರತೆಗೆದು ಗಾಳಿಯಲ್ಲಿ ಎಸೆದಿದ್ದಾರೆ. ನೋಟುಗಳು ಮುಖ್ಯ ರಸ್ತೆಯಲ್ಲಿ ಬಿದ್ದಿದ್ದವು.

ಶಾಂತಿದೇವಿ ಮಾತನಾಡಿ, "ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ರಾಜ್ಯಾದ್ಯಂತ ಭ್ರಷ್ಟಾಚಾರವನ್ನು ಹರಡಿದೆ. ಪೊಲೀಸರು ಹಣವಿಲ್ಲದೆ ಯಾವ ಕೆಲಸವನ್ನೂ ಮಾಡುವುದಿಲ್ಲ. ನನ್ನ ನಾಲ್ಕು ವರ್ಷಗಳ ಹಿಂದಿನ ಪ್ರಕರಣ ಕೆಂಟ್ ಪೊಲೀಸ್ ಠಾಣೆಯಲ್ಲಿ ಇನ್ನೂ ನಡೆಯುತ್ತಿದೆ. ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಹಣ ಇರುವವರ ಮಾತನ್ನು ಮಾತ್ರ ಪೊಲೀಸರು ಕೇಳುತ್ತಾರೆ. ಬಡವರ ಬಗ್ಗೆ ಯಾವುದೇ ಕಾಳಜಿ ವಹಿಸಲ್ಲ. ಹೀಗಾಗಿ ನಾನು ಪೊಲೀಸರಿಗೆ ಎಷ್ಟು ಹಣ ಬೇಕೋ ಅಷ್ಟು ನೀಡಲು ಬಂದಿದ್ದೇನೆ" ಎಂದು ಬೇಸರ ತೋಡಿಕೊಂಡರು. ನಂತರ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಇದನ್ನೂ ಓದಿ:ಸರ್ಕಾರಿ ಬಸ್​ಗಳೆಲ್ಲ ರಶ್ ರಶ್.. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ: ವಿಡಿಯೋ

ABOUT THE AUTHOR

...view details