ಯಲಹಂಕದಲ್ಲಿ ರಸ್ತೆ ಕಾಮಗಾರಿ ವಿಳಂಬ.. ಅಪಘಾತಕ್ಕೆ ಮಹಿಳಾ ಉದ್ಯೋಗಿ ಬಲಿ - ಖಾಸಗಿ ಶಾಲೆಯ ಉದ್ಯೋಗಿ ಸಾವು
ಯಲಹಂಕ (ಬೆಂಗಳೂರು): ರಸ್ತೆ ಕಾಮಗಾರಿಯಿಂದ ನಡೆದ ಅಪಘಾತದಲ್ಲಿ ಮಹಿಳೆಯೊಬ್ಬರು ಕ್ಯಾಂಟರ್ ಗಾಡಿಗೆ ಬಲಿಯಾಗಿದ್ದಾರೆ. ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಡಿಯಲ್ಲಿ ಇಂದು ಮಧ್ಯಾಹ್ನ ಘಟನೆ ನಡೆದಿದ್ದು, ಘಟನೆಯಲ್ಲಿ ಖಾಸಗಿ ಶಾಲೆಯ ಉದ್ಯೋಗಿಯಾಗಿರೋ ನಳಿನಾ ಮೃತಪಟ್ಡಿದ್ದಾರೆ. ಕಳೆದ ಕೆಲ ತಿಂಗಳಿನಿಂದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಯ ಗುಂಡಿ ತಪ್ಪಿಸಲು ವಾಹನ ಸವಾರರು ಅನಿವಾರ್ಯವಾಗಿ ಒನ್ ವೇ ರಸ್ತೆ ಬಳಸುತ್ತಿದ್ದಾರೆ. ಅದೇ ರೀತಿಯಲ್ಲಿ ಒನ್ ವೇ ಗೆ ನಳಿನಾ ಸ್ಕೂಟರ್ ಹತ್ತಿಸಿದಾಗ ಹಿಂದಿನಿಂದಿ ಬಂದ ಕ್ಯಾಂಟರ್ ನಳಿನಾ ತಲೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ನಳಿನಾ ಸಾವನ್ನಪ್ಪಿದ್ದಾರೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಚಾಲಕನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.
ಇದನ್ನೂ ಓದಿ:ಟ್ಯಾಂಕರ್ - ಕ್ಯಾಂಟರ್ ನಡುವೆ ಅಪಘಾತ: ಚಾಲಕನ ಎರಡೂ ಕಾಲುಗಳು ಕಟ್