ಕೊಪ್ಪಳದಲ್ಲಿ ಕಲುಷಿತ ನೀರು ಸೇವಿಸಿ ಮಹಿಳೆ ಸಾವು; 18 ಮಂದಿ ಅಸ್ವಸ್ಥ - ಈಟಿವಿ ಭಾರತ್ ಕನ್ನಡ ನ್ಯೂಸ್
ಕೊಪ್ಪಳ : ಕಲುಷಿತ ನೀರು ಕುಡಿದು ಮಹಿಳೆ ಸಾವನ್ನಪ್ಪಿದ್ದು, 18 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಕನಕಗಿರಿ ತಾಲೂಕಿನ ಬಸರಿಹಾಳದಲ್ಲಿ ಇಂದು ಜರುಗಿದೆ. ಬಸರಿಹಾಳ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಸೋರಿಕೆಯಾಗಿ ಕಲುಷಿತವಾಗಿದೆ. ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ದುರಸ್ತಿಗೆ ಮೀನಮೇಷ ಎಣಿಸಿದ್ದಾರೆ. ಹೀಗಾಗಿ, ಬೇಜವಾಬ್ದಾರಿಯಿಂದ ಮಹಿಳೆ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಮತ್ತೊಂದೆಡೆ, ಜಿಲ್ಲೆಯ ಬಿಜಕಲ್ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 15 ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಮದಲ್ಲಿ ಕಳೆದೊಂದು ವಾರದಿಂದ ಜನರು ವಾಂತಿ ಬೇಧಿಯಿಂದ ಬಳಲುತ್ತಿದ್ದಾರೆ. ಕಲುಷಿತ ನೀರು ಸೇವಿಸಿ ಇಲಕಲ್, ದೋಟಿಹಾಳ, ಸಿಂಧನೂರು, ಕುಷ್ಟಗಿ ಭಾಗದ ನಿವಾಸಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎಚ್ಚೆತ್ತ ಜಿಲ್ಲಾಡಳಿತ : ಇಂದು ಬಸರಿಹಾಳ ಗ್ರಾಮಕ್ಕೆ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ರತ್ನ ಪಾಂಡೆಯಾ ಭೇಟಿ ನೀಡಿ ಪರಿಶೀಲಿಸಿದರು. ತಕ್ಷಣ ಪೈಪ್ ಲೀಕೇಜ್ ಬಂದ್ ಮಾಡಲು ಸೂಚನೆ ನೀಡದರು. ಓವರ್ ಹೆಡ್ ಟ್ಯಾಂಕ್ ಸ್ವಚ್ಛಗೊಳಿಸಿ ನೀರು ಬಿಡಲು ಸೂಚಿಸಿದರು.
ಇದನ್ನೂ ಓದಿ :ಸೇತುವೆ ಮೇಲಿಂದ ಉರುಳಿಬಿದ್ದ ಲಾರಿ - ವಿಡಿಯೋ