Kedarnath: ಕೇದಾರನಾಥ ಲಿಂಗದ ಮೇಲೆ ಮಹಿಳೆ ಹಣ ತೂರಿದ ವಿಡಿಯೋ ವೈರಲ್ - ಲಿಂಗದ ಮೇಲೆ ನೋಟು ತೂರಿದ ಮಹಿಳೆ
ರುದ್ರಪ್ರಯಾಗ (ಉತ್ತರಾಖಂಡ):ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಉತ್ತರಾಖಂಡದ ಕೇದಾರನಾಥ ದೇವಾಲಯಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಹೊಸ ವಿವಾದ ಎದ್ದಿದೆ. ಕೇದಾರನಾಥ ಧಾಮದ ಗರ್ಭಗುಡಿಯಲ್ಲಿ ಚಿನ್ನದ ಲೇಪನದ ವಿವಾದ ಇನ್ನೂ ಜೀವಂತವಾಗಿರುವ ನಡುವೆಯೇ ಗರ್ಭಗುಡಿಯಲ್ಲಿ ಮಹಿಳೆಯೊಬ್ಬಳು ಲಿಂಗದ ಮೇಲೆ ನೋಟು ತೂರುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ಭಾರಿ ಟೀಕೆಗೆ ಗುರಿಯಾಗಿದೆ. ಘಟನೆಯ ಬಗ್ಗೆ ತನಿಖೆಗೂ ಸೂಚಿಸಲಾಗಿದೆ.
ಕೇದಾರನಾಥ ದೇವಾಲಯದ ಗರ್ಭಗುಡಿಯಲ್ಲಿ ಮಹಿಳೆಯೊಬ್ಬರು ದೇವರ ಮೇಲೆ ನೋಟುಗಳನ್ನು ತೂರುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆಕೆಯ ಪಕ್ಕದಲ್ಲಿ ಕೆಲವು ಪುರೋಹಿತರೂ ಸಹ ಇದ್ದು, ಮಂತ್ರ ಪಠಣ ಮಾಡುತ್ತಿದ್ದಾರೆ. ಇದು ಭಕ್ತಾದಿಗಳ ನಂಬಿಕೆಗೆ ಧಕ್ಕೆ ತಂದಿದೆ ಎಂದು ಟೀಕೆ ಕೇಳಿಬಂದಿದೆ.
ವಿಡಿಯೋ ವೈರಲ್ ಆದ ಬಳಿಕ ಕೇದಾರ್ ದೇವಾಲಯ ಸಮಿತಿಯು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ. ದೇವಸ್ಥಾನ ಸಮಿತಿ ಪ್ರಕಟಣೆ ಹೊರಡಿಸಿದ್ದು, ತಪ್ಪಿತಸ್ಥ ಮಹಿಳೆ ಮತ್ತು ಇತರರ ಮೇಲೆ ಕ್ರಮ ಕೈಗೊಳ್ಳಲು ಕೋರಲಾಗಿದೆ. ವಿಡಿಯೋದ ತನಿಖೆ ನಡೆಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಅಧೀಕ್ಷಕರಿಗೆ ಸಮಿತಿ ಮನವಿ ಮಾಡಿದೆ. ಧಾಮದ ಅಧಿಕಾರಿಗಳಿಂದಲೂ ಸ್ಪಷ್ಟನೆ ಕೇಳಲಾಗಿದೆ.
ಇದನ್ನೂ ಓದಿ:Vande bharat train: ಹುಬ್ಬಳ್ಳಿಗೆ ಆಗಮಿಸಿದ ವಂದೇ ಭಾರತ್.. ಟ್ರಯಲ್ ರನ್ ಟ್ರೈನ್ ವಿಡಿಯೋ!