ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕಾಶ್ಮೀರದ ಮೊಘಲ್ ಗಾರ್ಡನ್ : ವಿಡಿಯೋ - ಈಟಿವಿ ಭಾರತ ಕನ್ನಡ
Published : Nov 9, 2023, 11:04 PM IST
ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಚಳಿಗಾಲ ಬಂತೆಂದರೆ ಸಾಕು ಕಾಶ್ಮೀರಕ್ಕೆ ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಾರೆ. ಕಾರಣ ಇಲ್ಲಿ ಬೀಳುವಂತ ಹಿಮದ ರಾಶಿ ಪ್ರವಾಸಿಗರ ಮನಸೆಳೆಯುತ್ತದೆ. ಅದರಲ್ಲೂ ಲಾಲ್ ಸರೋವರದ ಬಳಿ ಇರುವ ಮೊಘಲ್ ಉದ್ಯಾನಕ್ಕೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.
ಹೌದು, ಪ್ರತಿ ವರ್ಷ ಚಳಿಗಾಲದ ಸಮಯದಲ್ಲಿ ಉದ್ಯಾನವನದಲ್ಲಿನ ಚಿನಾರ್ ಮರಗಳು ಎಲೆಗಳ ಬಣ್ಣವನ್ನು ಬದಲಿಸುತ್ತವೆ. ಸ್ವರ್ಣ ಬಣ್ಣಕ್ಕೆ ತಿರುಗಿ ಉದುರಿ ಬೀಳುವುದರಿಂದ ಇದು ಪ್ರವಾಸಿಗರಿಗೆ ಹೆಚ್ಚು ಆಕರ್ಷಿತವಾಗಿ ಕಾಣತೊಡಗುತ್ತದೆ. ಇಲ್ಲಿನ ರಮ್ಯವಾದ ನಿಸರ್ಗ ಸೌಂದರ್ಯವು ನೋಡುಗರ ಕಣ್ಮನ ಸೆಳೆಯುತ್ತದೆ.
ಒಂದೆಡೆ ಸ್ವರ್ಣ ಬಣ್ಣದ ಚಿನಾರ್ ಎಲೆಗಳು, ಮತ್ತೊಂದೆಡೆ ಅರಳಿದ ಕೇಸರಿ ಹೂವುಗಳು, ಕಾಶ್ಮೀರದ ಸೇಬಿನ ತೋಟಗಳು ಜನರನ್ನು ಆಕರ್ಷಣೆ ಮಾಡುತ್ತವೆ. ಹಾಗಾಗಿ ಚಳಿಗಾಲದಲ್ಲಿ ಜನ ಈ ಮೊಘಲ್ ಉದ್ಯಾನವನಕ್ಕೆ ಭೇಟಿ ನೀಡುತ್ತಾರೆ.
ಬಳಿಕ ಇದರ ಸಮೀಪದಲ್ಲೆ ಇರುವ ದಾಲ್ ಸರೋವರಕ್ಕೂ ಭೇಟಿ ನೀಡಿ ಅಲ್ಲಿ ದೋಣಿ ವಿಹಾರದ ಮೂಲಕ ಆನಂದ ಪಡುತ್ತಾರೆ. ಈ ಹಿನ್ನೆಲೆ ಚಳಿಗಾಲ ಬಂತೆಂದರೆ ಕಾಶ್ಮೀರ ಪ್ರವಾಸಿಗರ ನೆಚ್ಚಿನ ತಾಣವಾಗಿ ಮಾರ್ಪಾಡಾಗುತ್ತದೆ.
ಇದನ್ನೂ ಓದಿ:ಋಷಿಕೇಶ: ಗಂಗಾರತಿ ಬೆಳಗಿದ ಬಾಲಿವುಡ್ ನಟಿ ರವೀನಾ ಟಂಡನ್- ವಿಡಿಯೋ