ಅಟ್ಟಹಾಸ ಮೆರೆದಿದ್ದ ಕಾಡಾನೆ ಅಂತೂ ಸೆರೆ: ಆನೆ ಶಿಬಿರಕ್ಕೆ ಸ್ಥಳಾಂತರ - Etv Bharat Kannada
ವಯನಾಡ್(ಕೇರಳ): ಇಲ್ಲಿಯ ಜನನಿಬಿಡ ಪಟ್ಟಣವಾದ ಸುಲ್ತಾನ್ ಬತ್ತೇರಿಯಲ್ಲಿ ಅಟ್ಟಹಾಸ ಮೆರೆದಿದ್ದ ಕಾಡಾನೆಯೊಂದನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿದು ಮುಥಂಗ ಎಂಬ ಆನೆ ಶಿಬಿರಕ್ಕೆ ಕಳುಹಿಸಿದ್ದಾರೆ. ಕೆಲವು ದಿನಗಳಿಂದ ಆನೆಯನ್ನು ಹಿಡಿಯಲು ಪ್ರಯತ್ನಿಸಲಾಗಿತ್ತಾದರೂ ಸಾಧ್ಯವಾಗಿರಲಿಲ್ಲ. ಇಂದು ಇಲ್ಲಿಯ ಕುಪ್ಪಾಡಿಯ ಬಳಿ ಅರಣ್ಯ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ. ಬಳಿಕ ಆನೆಯನ್ನು ಶಾಂತಗೊಳಿಸಿ ಲಾರಿಯ ಮುಖಾಂತರ ಅದನ್ನು ಮುಥಂಗ ಆನೆ ಶಿಬಿರಕ್ಕೆ ಸ್ಥಳಾಂತರಿಸಿದ್ದಾರೆ. ಆನೆಗೆ ತರಬೇತಿ ನೀಡಿ ಬಳಿಕ ಅದನ್ನು ಕುಮ್ಕಿ ಆನೆಯ ಗುಂಪಿಗೆ ಸೇರಿಸಲಾಗುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
Last Updated : Feb 3, 2023, 8:38 PM IST