ಕರ್ನಾಟಕ

karnataka

ಜಾರ್ಖಂಡ್ ಧರಗುಳ್ಳಿ ಗ್ರಾಮಕ್ಕೆ ಕಾಡಾನೆ ನುಗ್ಗಿ ಹಾನಿ

ETV Bharat / videos

ದೇವಸ್ಥಾನ, ಮನೆಗಳಿಗೆ ನುಗ್ಗಿದ ಕಾಡಾನೆ.. ಅಪಾರ ಹಾನಿ, ಆತಂಕದಲ್ಲಿ ಜನರು... ವಿಡಿಯೋ ವೈರಲ್​ - ಪವಿತ್ರ ಶ್ರಾವಣ ಮಾಸದಲ್ಲಿ ಕಾಡಾನೆ

By

Published : Jul 28, 2023, 4:47 PM IST

ಗಿರಿಡಿಹ(ಜಾರ್ಖಂಡ್​):ಜಿಲ್ಲೆಯ ಧರಗುಳ್ಳಿ ಗ್ರಾಮಕ್ಕೆ ಕಾಡಾನೆಯೊಂದು ಶುಕ್ರವಾರ ಬೆಳಗ್ಗೆ ಅಂಗನವಾಡಿ ಕಟ್ಟಡ, ದೇವಸ್ಥಾನ ಹಾಗೂ ಕೆಲ ಮನೆಗಳಿಗೆ ನುಗ್ಗಿ ಹಾನಿ ಮಾಡಿದೆ. ಇದರಿಂದಾಗಿ ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ. ಜಿಲ್ಲೆಯ ಬಗೋದರ್ ಪೊಲೀಸ್ ಠಾಣಾ ವ್ಯಾಪ್ತಿಯ ಧರಗುಳ್ಳಿಯಲ್ಲಿ ಕಾಡಾನೆ ಚಲನವಲನವನ್ನು ಯಾರೊಬ್ಬರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಫುಲ್ ವೈರಲ್ ಆಗಿದೆ.

 ಕಾಡಾನೆ ಹಿಂಡಿನಿಂದ ತಪ್ಪಿಸಿಕೊಂಡು ದಾರಿ ತಪ್ಪಿ ಧರಗುಳ್ಳಿ ಗ್ರಾಮಕ್ಕೆ ನುಗ್ಗಿರುವ ಕಾಡಾನೆ ಆಕ್ರಮಣಕಾರಿ ರೂಪ ನೋಡಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಾಡಾನೆ ಚಲನವಲನವನ್ನು ಕೆಲವರು  ನೋಡಿದಾಗ ಅದಕ್ಕೆ ಹಸಿವು ಮತ್ತು ಬಾಯಾರಿಕೆ ಆಗಿರುವುದು ಗೊತ್ತಾಗಿದೆ. ಹಸಿವಿನಿಂದ ಕಂಗೆಟ್ಟಿದ್ದ ಕಾಡಾನೆ ಅಂಗನವಾಡಿ ಕಟ್ಟಡದ ಮುಖ್ಯ ಗೇಟ್​​ನ್ನು ಮುರಿದು ಒಳಪ್ರವೇಶ ಮಾಡಿರುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದಾಗಿದೆ.  

ವಿಡಿಯೋದಲ್ಲಿ ಹಸಿದ ಆನೆ ಏನಾದರೂ ತಿನ್ನಲು ಹವಣಿಸುತ್ತಿದೆಯಂತೆ. ಕಾಡಾನೆ ಆಹಾರ ಅರಸಿ ದೇವಸ್ಥಾನಕ್ಕೆ ನುಗ್ಗಿದೆ. ಪವಿತ್ರ ಶ್ರಾವಣ ಮಾಸದಲ್ಲಿ ಕಾಡಾನೆ ದೇವಾಲಯವನ್ನು ಪ್ರವೇಶಿಸಿದ ನಂತರ, ಕೆಲವು ಗ್ರಾಮಸ್ಥರು ಅದನ್ನು ಧಾರ್ಮಿಕ ದೃಷ್ಟಿಕೋನದಿಂದ ನೋಡಲು ಪ್ರಾರಂಭಿಸಿದರು. ಹರೇ ರಾಮ, ಹರೇ ಕೃಷ್ಣ ಎಂದು ಜಪಿಸಲು ಶುರು ಮಾಡಿದರು. 

ಜನರು ಆನೆಯನ್ನು ದೇವರ ರೂಪದಲ್ಲಿ ಪೂಜಿಸುತ್ತಾರೆ. ಗ್ರಾಮದ ರಾಧಾಕೃಷ್ಣ ದೇವಸ್ಥಾನಕ್ಕೆ ನುಗ್ಗಿದ ಆನೆ ಅಲ್ಲಿಯೂ ಸ್ವಲ್ಪ ಹಾನಿ ಮಾಡಿದೆ. ನಂತರ ಗ್ರಾಮಸ್ಥರು ಬೆಂಕಿ ಉಂಡೆ ಹಚ್ಚಿ, ಪಟಾಕಿ ಸಿಡಿಸಿ ಆನೆಯನ್ನು ಓಡಿಸಿದರು. ಆದರೆ ಕಾಡಾನೆ ಗ್ರಾಮಕ್ಕೆ ನುಗ್ಗಿದ್ದರಿಂದ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮಸ್ಥರ ಸಾಕಷ್ಟು ಪ್ರಯತ್ನದ ನಂತರ ಆನೆಯನ್ನು ಗ್ರಾಮದಿಂದ ಅರಣ್ಯದತ್ತ ಓಡಿಸಿದ್ದಾರೆ ಎಂದು ಮುಖಂಡ ಹರಿಪ್ರಕಾಶ್ ನಾರಾಯಣ ಮಾಹಿತಿ ನೀಡಿದ್ದಾರೆ.

ಇದನ್ನೂಓದಿ:Dharwad Rain: ಧಾರವಾಡದಲ್ಲಿ ನಿರಂತರ ಮಳೆ; 198 ಮನೆಗಳಿಗೆ ಹಾನಿ

ABOUT THE AUTHOR

...view details