ಕಾರಿನ ಮೇಲೆ ದಾಳಿ ನಡೆಸಿದ ಕಾಡಾನೆ - ವಿಡಿಯೋ - ಈಟಿವಿ ಭಾರತ ಕನ್ನಡ
ಕೊಯಂಬತ್ತೂರು :ತಮಿಳುನಾಡಿನಲ್ಲಿ ಕಾಡಾನೆಗಳು ದಾಳಿ ನಡೆಸುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿರುತ್ತವೆ. ಸೋಮವಾರ ತಡರಾತ್ರಿ ಇಲ್ಲಿನ ಕೋಟಗಿರಿ ಬೆಟ್ಟದ ರಸ್ತೆಯಲ್ಲಿ ಸಾಗುತ್ತಿದ್ದ ಕಾರಿನ ಮೇಲೆ ಏಕಾಏಕಿ ಕಾಡಾನೆಯೊಂದು ದಾಳಿ ನಡೆಸಿದೆ. ಈ ಸಂದರ್ಭ ಗಾಬರಿಗೊಂಡ ಕಾರು ಚಾಲಕ ಕಾಡಾನೆಯಿಂದ ತಪ್ಪಿಸಿಕೊಳ್ಳಲು ಕಾರನ್ನು ಹಿಂದಕ್ಕೆ ಚಲಾಯಿಸಿದ್ದಾರೆ. ಆದರೂ ಕಾಡಾನೆ ದಾಳಿಗೆ ಮುನ್ನುಗ್ಗಿದೆ. ತನ್ನ ದಂತದಿಂದ ಕಾರಿನ ಮುಂಭಾಗಕ್ಕೆ ಹಾನಿ ಮಾಡಿದೆ.
ಈ ವೇಳೆ ಕಾರು ಚಾಲಕ ಮತ್ತೆ ಕಾರನ್ನು ಹಿಂದಕ್ಕೆ ತೆಗೆದು ತಕ್ಷಣ ಆನೆಯಿಂದ ತಪ್ಪಿಸಿಕೊಂಡು ಹೋಗಿದ್ದಾರೆ. ಅದೃಷ್ಟವಶಾತ್ ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಈ ವಿಡಿಯೋವನ್ನು ಹಿಂದಿನ ವಾಹನದಲ್ಲಿದ್ದ ಪ್ರಯಾಣಿಕರೋರ್ವರು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ. ಇದರಿಂದಾಗಿ ಕೋಟಗಿರಿಗೆ ಹೋಗುತ್ತಿದ್ದ ವಾಹನಗಳು ಕೆಲಕಾಲ ಕಾಯಬೇಕಾಗಿ ಬಂತು. ಬಳಿಕ ಕಾಡಾನೆ ರಸ್ತೆ ಬದಿಯ ಗಿಡಗಳನ್ನು ತಿಂದು ಕಾಡಿಗೆ ಮರಳಿದೆ.
ಇಲ್ಲಿನ ಮೆಟ್ಟುಪಾಳ್ಯಂನ ಕೋಟಗಿರಿ ಜಲಪಾತದ ಬಳಿಯ ಕುಂಜಪನೈ ಅರಣ್ಯದಲ್ಲಿ ಕಾಡಾನೆಗಳ ಓಡಾಟ ಹೆಚ್ಚಿದೆ. ಈ ಕಾಡಾನೆಗಳು ರಾತ್ರಿ ವೇಳೆಯಲ್ಲಿ ಆಹಾರ ಮತ್ತು ನೀರು ಅರಸಿ ಕಾಡಿನಿಂದ ಹೊರಟು ಕೋಟಗಿರಿ ರಸ್ತೆ ದಾಟುವುದು ಸಾಮಾನ್ಯವಾಗಿದೆ.
ಇದನ್ನೂ ಓದಿ :ಉಘೇ ಮಾದಪ್ಪ ಈಗ ಇನ್ನಷ್ಟು ಶ್ರೀಮಂತ.. ಮಹದೇಶ್ವರನಿಗೆ ಹರಿದುಬಂತು ಕೋಟಿ ಕೋಟಿ ಹಣ