ಕರ್ನಾಟಕ

karnataka

ETV Bharat / videos

ರಾಮನಗರದಲ್ಲಿ ಬೆಳ್ಳಂಬೆಳಗ್ಗೆ ಕಾಡಾನೆ ಪ್ರತ್ಯಕ್ಷ.. ಗ್ರಾಮಸ್ಥರನ್ನ ಅಟ್ಟಾಡಿಸಿಕೊಂಡು ಹೋದ ಗಜರಾಜ! - ರಾಮನಗರ ಆನೆ ಸುದ್ದಿ

By

Published : Jul 22, 2022, 2:45 PM IST

Updated : Feb 3, 2023, 8:25 PM IST

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ದೊಡ್ಡನಹಳ್ಳಿ ಗ್ರಾಮದಲ್ಲಿ ಕಾಡಾನೆ ಪ್ರತ್ಯಕ್ಷವಾಗಿ ಕೆಲ ಕಾಲ ಆತಂಕ ಮೂಡಿಸಿತು. ಬೆಳ್ಳಂಬೆಳಗ್ಗೆ ಒಂಟಿ ಸಲಗನನ್ನು ಕಂಡು ಗ್ರಾಮಸ್ಥರನ್ನ ತಲ್ಲಣಗೊಂಡರು. ಗ್ರಾಮದಲ್ಲಿ ಕಾಡಾನೆ ಪ್ರತ್ಯಕ್ಷವಾಗಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದಂತಯೇ ಆನೆಯನ್ನ ಕಾಡಿಗೆ ಓಡಿಸಲು ಮುಂದಾದ ಜನರನ್ನು ಸಲಗವೇ ಅಟ್ಟಾಡಿಸಿದ ಘಟನೆಯು ನಡೀತು. ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ‌ ಗ್ರಾಮಕ್ಕೆ ಬಂದಿರುವ ಸಾಧ್ಯತೆ ಇದ್ದು, ಸಾಕಷ್ಟು ದೂರ ಜನರನ್ನು ಅಟ್ಟಾಡಿಸಿಕೊಂಡು ಸಲಗ ಹೋಗಿದೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗ್ರಾಮದಲ್ಲಿ ಆನೆ ಪ್ರತ್ಯಕ್ಷ ಹಿನ್ನೆಲೆ ಅಕ್ಕಪಕ್ಕದ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಆನೆಯನ್ನು ಕಾಡಿಗೆ ಓಡಿಸುವ ಕಾರ್ಯ ಕೈಗೊಂಡಿದ್ದಾರೆ.
Last Updated : Feb 3, 2023, 8:25 PM IST

ABOUT THE AUTHOR

...view details