ಸುಬ್ರಹ್ಮಣ್ಯ: ಜ್ಯೂಸ್ ಅಂಗಡಿಗೆ ನುಗ್ಗಿ ಕಬ್ಬು ತಿಂದು ಹೋದ ಕಾಡಾನೆ - wild elephant problem
ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಗುಂಡ್ಯ-ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮಣಿಭಾಂಡ ಸಮೀಪ ಕಾಡಾನೆಯೊಂದು ರಸ್ತೆ ಬದಿಯ ಜ್ಯೂಸ್ ಅಂಗಡಿಗೆ ಬಂದು ಜ್ಯೂಸ್ ಮಾಡಲು ಇಟ್ಟಿದ್ದ ಕಬ್ಬು ತಿಂದು ಹೋಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕರ್ತವ್ಯ ನಿರ್ವಹಿಸಿ ಕೊಂಬಾರು ನಿವಾಸಿಯೋರ್ವರು ರಾತ್ರಿ 10.30ರ ಸುಮಾರಿಗೆ ತನ್ನ ಮನೆಗೆ ಹಿಂತಿರುಗುತ್ತಿದ್ದಾಗ ಕಾಡಾನೆ ಕಬ್ಬು ತಿನ್ನುತ್ತಿರುವುದನ್ನು ನೋಡಿದ್ದಾರೆ. ಕೂಡಲೇ ತಮ್ಮ ಮೊಬೈಲ್ ಕ್ಯಾಮರಾ ಮೂಲಕ ಈ ದೃಶ್ಯ ಸೆರೆ ಹಿಡಿದಿದ್ದಾರೆ.
Last Updated : Feb 3, 2023, 8:23 PM IST