ಪತಿಗೆ ಪತ್ನಿಯೇ ಸ್ಟಾರ್ ಪ್ರಚಾರಕಿ: ಚುನಾವಣಾ ಅಖಾಡ ರಂಗೇರಿಸಿದ ಮಹಿಳಾಮಣಿಯರು
ರಾಜ್ಯದಲ್ಲೀಗ ಚುನಾವಣಾ ಹಬ್ಬ ಕಳೆಗಟ್ಟಿದೆ. ಘಟಾನುಘಟಿ ರಾಜಕಾರಣಿಗಳು ಟೊಂಕಕಟ್ಟಿಕೊಂಡು ರಾಜ್ಯಾದ್ಯಂತ ಅಭ್ಯರ್ಥಿಗಳ ಪರ ಪ್ರಚಾರ ನಡೆಸ್ತಿದಾರೆ. ಹೀಗಾಗಿ ಅವರ ಕ್ಷೇತ್ರಕ್ಕೇ ಸಮಯ ನೀಡೋಕೆ ಸಾಧ್ಯವಾಗದೇ ಇರುವುದರಿಂದ, ಅವರ ಪರವಾಗಿ ಕುಟುಂಬಸ್ಥರು ಮತಯಾಚನೆ ಮಾಡ್ತಿದಾರೆ. ಅದರಲ್ಲೂ ಪತ್ನಿಯರು ಅಖಾಡಕ್ಕಿಳಿದಿರುವುದು ಕಣವನ್ನು ರಂಗೇರಿಸಿದೆ.
ಸಿಎಂ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರವಾದ ಶಿಗ್ಗಾಂವಿಯಲ್ಲಿ ಪತ್ನಿ ಚೆನ್ನಮ್ಮ ಮತಬೇಟೆ ಆರಂಭಿಸಿದ್ದಾರೆ. ಇತ್ತ ಕನಕಪುರದಲ್ಲಿ ಡಿಕೆ ಶಿವಕುಮಾರ್ ಪರವಾಗಿ ಮಡದಿ ಉಷಾ ಮತಯಾಚನೆ ನಡೆಸ್ತಿದಾರೆ. ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಅವರು ಮತಕ್ಕಾಗಿ ಬೆವರಿಳಿಸ್ತಿದಾರೆ. ಶೀಲಾ ಅವರು ಸಿಪಿ ಯೋಗೇಶ್ವರ್ಗಾಗಿ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ.
ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪರ ಶಾಸಕಿ ಅನಿತಾ ಕುಮಾರಸ್ವಾಮಿ ಅಬ್ಬರದ ಪ್ರಚಾರ ನಡೆಸ್ತಿದಾರೆ. ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರ ಪತ್ನಿ ಶೀಲಾ ಅವರು ಮತಯಾಚನೆ ಆರಂಭಿಸಿದ್ದಾರೆ. ಅತ್ತ ಕನಕಪುರದ ಬಂಡೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪರವಾಗಿ ಪತ್ನಿ ಉಷಾ ಅವರು ಮತಬೇಟೆ ಶುರುವಿಟ್ಟುಕೊಂಡಿದ್ದಾರೆ. ಇಷ್ಟೇ ಅಲ್ಲದೇ, ಮಾಗಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ. ಬಾಲಕೃಷ್ಣರ ಪತ್ನಿ ರಾಧಾ, ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಪರವಾಗಿ ಲಕ್ಷ್ಮಿ ಅವರು ಮನೆಮನೆಗೆ ತೆರಳಿ ಮತದಾರರ ಮನವೊಲಿಸುತ್ತಿದ್ದಾರೆ. ಧಾರವಾಡ ಗ್ರಾಮೀಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಪರ ಪತ್ನಿ ಶಿವಲೀಲಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ, ಘಟಾನುಘಟಿಗಳು ರಾಜ್ಯಾದ್ಯಂತ ಓಡಾಡ್ತಿದ್ರೆ ಅವರ ಪತ್ನಿ ಮತ್ತು ಕುಟುಂಬಸ್ಥರು ಸ್ವಕ್ಷೇತ್ರದಲ್ಲಿ ಸಂಚಲನ ಉಂಟು ಮಾಡ್ತಿದಾರೆ. ಪತಿಯರ ಪರವಾಗಿ ಪತ್ನಿಯರೇ ಸ್ಟಾರ್ ಪ್ರಚಾರಕರಾಗಿದ್ದಾರೆ.
ಇದನ್ನೂ ನೋಡಿ:ನಗು ನಗುತ್ತಲೇ ಮುಖಾಮುಖಿಯಾದ ಸಿದ್ದರಾಮಯ್ಯ - ಬೊಮ್ಮಾಯಿ... ವಿಡಿಯೋ ನೋಡಿ