ಹುಬ್ಬಳ್ಳಿ: ರೈಲು ಹತ್ತುವಾಗ ಕಾಲು ಜಾರಿ ಗಾಲಿಗೆ ಸಿಲುಕಿ ವ್ಯಕ್ತಿ ಸಾವು - ಹುಬ್ಬಳ್ಳಿ ದಕ್ಷಿಣ ವಲಯದ ನಿಲ್ದಾಣ
ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟಿದ್ದ ವ್ಯಕ್ತಿಯೊಬ್ಬ, ಸಿಗ್ನಲ್ ಸಿಗದ ಕಾರಣ ಹುಬ್ಬಳ್ಳಿ ದಕ್ಷಿಣ ವಲಯದ ರೈಲು ನಿಲ್ದಾಣದಲ್ಲಿ ಕ್ಷಣಕಾಲ ತಂಗಿದ್ದ ರೈಲು ಹತ್ತಲು ಹೋಗಿ ಕಾಲು ಜಾರಿ ಗಾಲಿಗೆ ಸಿಲುಕಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ 17391 ರೈಲಿನಲ್ಲಿ ಅಪಘಾತ ಸಂಭವಿಸಿದೆ. ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ರೈಲಿನ ಗಾಲಿಗೆ ಸಿಲುಕಿದ ಪರಿಣಾಮ ದೇಹ ಸಂಪೂರ್ಣ ರಕ್ತಸಿಕ್ತವಾಗಿತ್ತು.
Last Updated : Feb 3, 2023, 8:34 PM IST