ಕರ್ನಾಟಕ

karnataka

ETV Bharat / videos

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಟ್ಟೆ ಕೊಡುತ್ತೇವೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ - Panchmasali Samaj

By

Published : Jan 15, 2023, 7:31 PM IST

Updated : Feb 3, 2023, 8:39 PM IST

ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ ನೂರಕ್ಕೆ ನೂರು ಮೀಸಲಾತಿ ಕೊಟ್ಟೆ ಕೊಡುತ್ತೇವೆ, ಈ ವಿಚಾರ ಕುರಿತು ಸಿಎಂ ಜೊತೆ ಮಾತಾಡಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹರಜಾತ್ರೆಯಲ್ಲಿ ನೆರೆದಿದ್ದ ಜನರಲ್ಲಿ ವಿಶ್ವಾಸ ಮೂಡಿಸಿದರು.‌ ದಾವಣಗೆರೆ ಜಿಲ್ಲೆಯ ಹರಿಹರದ ಹನಗವಾಡಿ ಗ್ರಾಮದ ಬಳಿ ಇರುವ ಪಂಚಮಸಾಲಿ ಮಠದಲ್ಲಿ ಜರುಗಿದ ಹರಜಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಟ್ಟೆ ಕೊಡಲು ಕೆಲ ಕಾನೂನು ತೊಡಕುಗಳಿವೆ. ಅವುಗಳನ್ನ ಪರಿಹರಿಸಿ ಸೂಕ್ತ ನಿರ್ಧಾರ, ಕೈಗೊಳ್ಳುತ್ತೇವೆ, ಇದನ್ನು ಪ್ರಶ್ನಿಸಿ ಕೆಲವರು ಕೋರ್ಟ್​ ಮೊರೆ ಹೋಗಿದ್ದಾರೆ‌. ಇನ್ನಷ್ಟು ಜನರು ಕೋರ್ಟ್​ಗೆ ಹೋಗಬಹುದು. ಆ ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿಕೊಂಡು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲಾಗುವುದು. ಇದಕ್ಕೆ ನಾನು ಕೂಡಾ ಬದ್ಧನಾಗಿರುವೇ ಎಂದು ಪ್ರಹ್ಲಾದ್​ ಜೋಶಿ ಎಂದರು.    

Last Updated : Feb 3, 2023, 8:39 PM IST

ABOUT THE AUTHOR

...view details