ಕರ್ನಾಟಕ

karnataka

ಹಿಮಾಚಲಪ್ರದೇಶದಲ್ಲಿ ಮೇಘಸ್ಫೋಟ

ETV Bharat / videos

ಹಿಮಾಚಲಪ್ರದೇಶದಲ್ಲಿ ಮೇಘಸ್ಫೋಟ, ಒಂದೇ ಕುಟುಂಬದ ಐವರು ನಾಪತ್ತೆ, ಮತ್ತೆ ಪ್ರವಾಹ ಪರಿಸ್ಥಿತಿ: ವಿಡಿಯೋ - cloudburst in himachal pradesh

By

Published : Aug 10, 2023, 11:58 AM IST

ಸಿರ್ಮೌರ್ (ಹಿಮಾಚಲ ಪ್ರದೇಶ) :ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ಬುಧವಾರ ಮೇಘಸ್ಫೋಟ ಸಂಭವಿಸಿದ್ದು, ಗಿರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹದ ನೀರು ವಸತಿ ಪ್ರದೇಶಗಳಿಗೆ ನುಗ್ಗಿ ಅನಾಹುತ ಸೃಷ್ಟಿಸುತ್ತಿದೆ. ಇದೇ ವೇಳೆ, ಒಂದೇ ಕುಟುಂಬದ ಐವರು ನಾಪತ್ತೆಯಾಗಿದ್ದು, 50 ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ಜಿಲ್ಲೆಯ ಮಾಳಗಿ ದಡಿಯಾತ್, ಔಲಿ, ತಹಸಿಲ್ ಪೌಂಟಾ ಸಾಹಿಬ್ ಗ್ರಾಮಗಳಿಗೆ ಪ್ರವಾಹದ ನೀರು ನುಗ್ಗಿದೆ. ಅಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್​ಇಒಸಿ) ತಿಳಿಸಿದೆ. ಪ್ರವಾಹದಲ್ಲಿ ಕುಲದೀಪ್ ಕಮರ್ ಎಂಬುವರ ಕುಟುಂಬದ ಐವರು ಕಾಣೆಯಾಗಿದ್ದಾರೆ. ಪತ್ತೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್ 24 ರಂದು ಮಾನ್ಸೂನ್ ಪ್ರಾರಂಭವಾದಾಗಿನಿಂದ ಹಿಮಾಚಲ ಪ್ರದೇಶದಲ್ಲಿ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಇಲ್ಲಿಯವರೆಗೆ ಒಟ್ಟು 223 ಮಂದಿ ಸಾವನ್ನಪ್ಪಿದ್ದರೆ, 295 ಮಂದಿ ಗಾಯಗೊಂಡಿದ್ದಾರೆ. 800 ಮನೆಗಳು ಸಂಪೂರ್ಣವಾಗಿ ಹಾನಿ, 7500 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಹಲವಾರು ಸ್ಥಳೀಯ ಸಂಸ್ಥೆಗಳು, ಶಾಲೆಗಳು ಮತ್ತು ಸಮುದಾಯ ಕೇಂದ್ರಗಳು ಸಹ ನಷ್ಟಕ್ಕೀಡಾಗಿವೆ ಎಂದು ಕಂದಾಯ ಸಚಿವ ಜಗತ್ ಸಿಂಗ್ ನೇಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಭಾರತದ ಏಕೈಕ ಸಂಚಾರ ಪಕ್ಷಿ ಆಸ್ಪತ್ರೆ.. ಎಲೆಕ್ಟ್ರಿಕ್​ ಬೈಕ್​ ಮೂಲಕ ಸೇವೆ!

ABOUT THE AUTHOR

...view details