ಕರ್ನಾಟಕ

karnataka

ETV Bharat / videos

ಸಿಲಿಕಾನ್ ಸಿಟಿಯ ಇಂದಿರಾ ಕ್ಯಾಂಟೀನ್‌ಗಳಿಗೆ ನೀರು ಸಂಪರ್ಕ ಕಡಿತ: ಸಾರ್ವಜನಿಕರ ಆಕ್ರೋಶ - etv bharat karnataka

By

Published : Jan 30, 2023, 5:59 PM IST

Updated : Feb 3, 2023, 8:39 PM IST

ಬೆಂಗಳೂರು: ಸಿಲಿಕಾನ್ ಸಿಟಿಯ ಹಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ ನೀರಿನ ಬಿಲ್ ಪಾವತಿ ಮಾಡದ ಕಾರಣ ನೀರು ಸಂಪರ್ಕವನ್ನು ಬಿಡಬ್ಲ್ಯೂಎಸ್‌ ಎಸ್‌ಬಿ ಕಡಿತಗೊಳಿಸಿದೆ. ಇದರಿಂದ ನೀರಿನ ಅಭಾವ ಉಂಟಾಗಿದ್ದು, ಸಾರ್ವಜನಿಕರು ಊಟಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದು, ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ವಸಂತನಗರ, ಜಯನಗರ, ಬನ್ನಪ್ಪಪಾರ್ಕ್, ಶಿವಾಜಿನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಇರುವ ಇಂದಿರಾ ಕ್ಯಾಂಟೀನ್‌ಗಳಿಗೆ ನೀರು ಸಿಗುತ್ತಿಲ್ಲ ಎನ್ನುವ ದೂರುಗಳು ಬಂದಿವೆ. ನೀರಿನ ಬಿಲ್ ದುಪ್ಪಟ್ಟು ಆಗಿತ್ತು. ಈ ಸಂಬಂಧ ಎಚ್ಚರಿಕೆ ನೀಡಿದರೂ, ಗುತ್ತಿಗೆದಾರರ ಹಣ ಪಾವತಿ ಮಾಡಿರಲಿಲ್ಲ ಹೀಗಾಗಿ ನೀರಿನ ಸಂಪರ್ಕ ಕಡಿತ ಮಾಡಲಾಗಿದೆ ಎಂದು ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳು ತಿಳಿಸಿದ್ದಾರೆ. 

Last Updated : Feb 3, 2023, 8:39 PM IST

ABOUT THE AUTHOR

...view details